ಕ್ರಿಸ್ತನ ಸಂದೇಶ ಸಾರ್ವತ್ರಿಕ ಸತ್ಯವಾಗಿದೆ: ಈಶ್ವರ ಖಂಡ್ರೆ

ಭಾಲ್ಕಿ:ಡಿ.28: ಏಸು ಕ್ರಿಸ್ತನ ಸಂದೇಶ ಸಾರ್ವತ್ರಿಕ ಸತ್ಯವಾಗಿದೆ. ದಂಡಿಸಿದವರಿಗೆ ಪ್ರತಿಯುತ್ತರ ನೀಡದೇ ಸುಮ್ಮನಿದ್ದರೆ, ಜಗಳದ ಮೂಲವೇ ಇರುವುದಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಫೇತ್ ಎಜಿ ಚರ್ಚನಲ್ಲಿ ಶುಕ್ರವಾರ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಮುಂದೆ ಮಾಡು ಎನ್ನುವ ಏಸು ತತ್ವ ಸಾರ್ವತ್ರಿಕ ಸತ್ಯವಾದ ಮಾತಾಗಿದೆ. ಏಸು ತತ್ವವನ್ನು ನಾವೆಲ್ಲರೂ ಅನುಕರಣೆ ಮಾಡಿದಲ್ಲಿ ಜಗಳದ ಮಾತೇ ಇರುವುದಿಲ್ಲ ಎಂದು ಹೇಳಿದರು. ನಂತರ ಕ್ರೈಸ್ತ ಬಾಂದವರಿಗೆ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು.

ಚರ್ಚನ ಸಭಾ ಪಾಲಕ ಪಾಸ್ಟರ್ ರಾಜಕುಮಾರ ಬೋರಾಳ ಸೇರಿದಂತ ಪಾಸ್ಟರ್ ಸುನೀಲ, ಪಾಸ್ಟರ್ ಅಶೋಕ, ಪಾಸ್ಟರ್ ದಯಾನಂದ ಕ್ರಿಸ್ಮಸ್ ಹಬ್ಬದ ಸಂದೇಶ ಸಾರಿದರು.

ಚರ್ಚನ ಪ್ರಮುಖರಾದ ದೇವಿದಾಸ ರೇಷ್ಮೆ, ಎಮ್.ಪಿ ರಾಜಕುಮಾರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚೌಹಾಣ, ಸತೀಶ ಮಾಳಗೆ, ಶಂಕರ ಸವರ್ಗಾಂವ, ಅರ್ಜುನ, ಲಾಲಪ್ಪ ಉಪಸ್ಥಿತರಿದ್ದರು.

ರೋಹಿದಾಸ ನಾಗರಾಳಕರ ಸ್ವಾಗತಿಸಿದರು. ಜೀವನ ಬೇಂದ್ರೆ ನಿರೂಪಿಸಿದರು. ಮನೋಹರ ಮೇತ್ರೆ ವಂದಿಸಿದರು.