ಕ್ರಿಶ್ಚಿಯನ್ ಅಸೋಸಿಯೇಷನ್ ಗೆ ನೇಮಕ

ಬೀದರ:ಡಿ.4:’ಇಂಡಿಯನ್ ಕ್ರಿಶ್ಚಿಯನ್ ವೆಲ್ ಫೇರ್ ಅಸೋಸಿಯೇಷನ್‍ನ ಹುಮನಾಬಾದ್ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಎಂದು ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಜೈಸನ್ ಮೋಡಿ ತಿಳಿಸಿದ್ದಾರೆ.
ಪದಾಧಿಕಾರಿಗಳು: ಸಾಗರ್ ಎಸ್.ಬಸನೂರ್ (ಅಧ್ಯಕ್ಷ), ಜಾಕ್ಸನ್ ಕಟ್ಟಿಮನಿ (ಉಪಾಧ್ಯಕ್ಷ) ಮತ್ತು ವಿಜಯಕುಮಾರ ಚಟ್ನಳ್ಳಿ (ಕಾರ್ಯದರ್ಶಿ).ನೇಮಕಾತಿ ಪತ್ರ ವಿತರಣೆ: ಬೀದರ್‍ನ ಅಸೋಸಿಯೇಷನ್ ಕಚೇರಿಯಲ್ಲಿ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜಾಗೀರದಾರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಜೈಸನ್ ಮೋಡಿ ಅವರು ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿದರು. ಕಲಬುರಗಿ ವಿಭಾಗೀಯ ಅಧ್ಯಕ್ಷ ಪ್ರಕಾಶ ಕಾಡವಾದ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಗುತ್ತೇದಾರ ಇದ್ದರು.