ಕ್ರಿಯಾಶೀಲ ಬದುಕಿಗೆ ಗೌರವ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,22- ತಮ್ಮ‌73 ನೇ ವಯಸ್ಸಿನಲ್ಲೂ ಆತ್ಯಂತ ಕ್ರಿಯಾ ಶೀಲರಾಗಿ, ನಾನಾ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ. ಕರ್ನಾಟಕ‌ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರನ್ನು ನಗರದ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು, ಆತ್ಮೀಯರು, ಬಂಧುಗಳು ಸನ್ಮಾನಿಸಿ ಗೌರವಿಸಿ ನಿಮ್ಮ ಬದಕು ಮತ್ತಷ್ಟು ಕ್ರಿಯಾ ಶೀಲವಾಗಲಿ ಎಂದೂ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಇಂಜಿನೀಯರ್ ಟಿ.ಹೆಚ್.ಎಂ.ಚನ್ನವೀರಸ್ವಾಮಿ, ನಿವೃತ್ತ ಅಧಿಕಾರಿಗಳಾದ   ಟಿ.ಹೆಚ್.ಎಂ. ರಾಜಶೇಖರ್, ಟಿ.ಹೆಚ್.ಎಂ. ವಿಜಯಕುಮಾರಿ  ರಾಜಶೇಖರ್, ಹೊಸಪೇಟೆಯ ಇಂಜಿನೀಯರ್ ಟಿ.ಹೆಚ್.ಎಂ. ಸೋಮಶೇಖರ್, ಉಪನ್ಯಾಸಕಿ ಟಿ.ಹೆಚ್.ಎಂ ಜಯಶ್ರೀ ಸೋಮಶೇಖರ್,  ಟಿ.ಹೆಚ್.ಎಂ ನಾಗರತ್ನ‌ಲಕ್ಷ್ಮೇಶ್ವರ ಮಠ್ ಗದಗ, ರಶ್ಮಿ, ಅನುಷ್ಕಾ ಮೊದಲಾದವರು ಇದ್ದರು