ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ


ಸಂಜೆವಾಣಿ ವಾರ್ತೆ
ಕುರುಗೋಡು:ಏ.1: ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಗುರುವಾರ ಜರುಗಿದೆ.
ಕರಿಬ್ಯಾಡರ ಓಬಳೇಶ (31) ಮೃತ ರೈತ.
ಮಾರ್ಚ್ 29 ರಂದು ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದರು. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಮೃತಪಟ್ಟರು.
ತಾತನ ಹೆಸರಿನಲ್ಲಿರುವ 75 ಸೆಂಟ್ಸ್ ಜಮೀನು ಮತ್ತು 8ಎಕರೆ ಗುತ್ತಿಗೆ ಪಡೆದಿದ್ದ ಜಮೀನಿನಲ್ಲಿ ಎರಡು ವರ್ಷಗಳಿಂದ ಮೆಣಸಿನಕಾಯಿ ಬೆಳೆ ಬೆಳೆಯತಿದ್ದರು ಎನ್ನಲಾಗಿದೆ.
ಎರಡು ವರ್ಷಗಳಿಂದ ಬೆಳೆನಷ್ಟವಾದ ಪರಿಣಾಮ ಕಂಗೆಟ್ಟಿದ್ದರು ಎಂದು ತಿಳಿದಿದೆ. ಗ್ರಾಮದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಂಗಾರದ ಒಡವೆಯ ಮೇಲೆ 1ಲಕ್ಷ ಸಾಲ . ರಸಗೊಬ್ಬರ, ಕ್ರಿಮಿನಾಶಕ, ಬೆಳೆನಿರ್ವಹಣೆಗೆ ಮಾಡಿದ ಸಾಲ 14 ಲಕ್ಷ ಸಾಲ ಸೇರಿ ಒಟ್ಟು 15 ಲಕ್ಷ ಮಾಡಿದ್ದರು ಎಂದು ಮೃತರ ಕುಟುಂಬ ಮೂಲಗಳಿಂದ ತಿಳಿದಿದೆ.
ತಹಶೀಲ್ದಾರ್ ಗುರುರಾಜ್ ಎಂ. ಚಲವಾದಿ,ಕೃಷಿ ಅಧಿಕಾರಿ ದೇವರಾಜ್ ಮತ್ತು ಪೊಲೀಸರು ಮೃತ ರೈತನ ಮನೆಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದರು.
ಮೃತ ರೈತನಿಗೆ ಪತ್ನಿ, ಪುತ್ರಿ ಮತ್ತು ಎರಡು ಪುತ್ರರು ಇದ್ದಾರೆ. ಮೃತ ರೈತನ ಪತ್ನಿ ಪಾರ್ವತಮ್ಮ ನೀಡಿದ ದೂರಿನನ್ವಯ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.