ಕ್ರಿಪ್ಟೋ ಕರೆನ್ಸಿ ವಿಶೇಷ ಕಾರ್ಯಾಗಾರ

ತುಮಕೂರು, ಆ. ೩- ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿಯು ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ವೈಸ್ ಪ್ರೆಸಿಡೆಂಟ್ ಯುನೋಕಾಯಿನ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ವಿ.ಹೇಮರಾಣಿ ಹೇಳಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರಿಪ್ಟೋ ಕರೆನ್ಸಿಯ ಬಗ್ಗೆ ವಿದ್ಯಾರ್ಥಿಗಳಿಗೆ ಇರುವ ಅನುಮಾನಗಳನ್ನು ನಿವಾರಿಸಿ, ಕ್ರಿಪ್ಟೋ ಕರೆನ್ಸಿಯ ಪ್ರಾಮುಖ್ಯತೆ ಹಾಗೂ ಅದರ ಉಪಯೋಗಗಳನ್ನು ತಿಳಿಸಿದರು.
ಶ್ರೀದೇವಿ ಎಂಬಿಎ ವಿಭಾಗ ಮುಖ್ಯಸ್ಥ ಡಾ.ಕೆ.ಎಸ್.ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರಿಪ್ಟೋ ಕರೆನ್ಸಿಯ ಉದ್ದೇಶ ಮತ್ತು ಕ್ರಿಪ್ಟೋ ಕರೆನ್ಸಿಯ ಪ್ರಾಮುಖ್ಯತೆಯನ್ನು ಅರ್ಥಪೂರ್ಣವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ವೈಸ್ ಪ್ರೆಸಿಡೆಂಟ್ ಯುನೋಕಾಯಿನ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ವಿ.ಹೇಮರಾಣಿ ರವರನ್ನು ಅಭಿನಂದಿಸಲಾಯಿತು.
ಕಾರ್ಯಾಗಾರದಲ್ಲಿ ಸೋಮಸುಂದರ್, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ಎಂ.ಬಿ.ಎ.ವಿಭಾಗದ ಉಪನ್ಯಾಸಕರಾದ ಪ್ರೊ.ಬಿ.ಎನ್.ಪ್ರತಾಪ್, ಪ್ರೊ.ಗ್ರೇಸ್ ಹೇಮಲತಾ, ಪ್ರೊ.ಟಿ.ಎಂ.ಪ್ರವೀಣ್‌ಕುಮಾರ್, ಪ್ರೊ. ಅಮುತಲ್ ನಸೀಭ್, ಪ್ರೊ.ಶ್ರೀಚರಣ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.