ಕ್ರಿಕೇಟ್: ಶ್ರೀರಾಮ್ ಸಿಸಿ ತಂಡ ಜಯ

ಹುಬ್ಬಳ್ಳಿ, ಮಾ 29: ಎಸ್.ಎಸ್.ಕೆ ಯೂಥ್ ಕ್ಲಬ್ ವತಿಯಿಂದ ಸಮಾಜದ ಯುವಕರಿಗಾಗಿ ಕ್ರಿಕೆಟ್ ಟೂರ್ನಾಮೆಂಟವನ್ನು ಕಳೆದ 4 ದಿನಗಳವರೆಗೆ
ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ಎಸ್.ಎಸ್.ಕೆ. ಕ್ರಿಕೆಟ್ ಟೂರ್ನಾಮೆಂಟ್ ಹಮ್ಮಿಕೊಳ್ಳಲಾಯಿತು.
ಫೈನಲ್‍ನಲ್ಲಿ ಜಯ ಪಡೆದ ಪ್ರಥಮ ಸ್ಥಾನ ಹುಬ್ಬಳ್ಳಿಯ ಶ್ರೀ ರಾಮ ಸಿಸಿ ತಂಡಕ್ಕೆ ರೂ. 21,000/- ದ್ವಿತೀಯ ಸ್ಥಾನ ಹುಬ್ಬಳ್ಳಿಯ 11 ಸಿಕ್ಸರ್ಸ ತಂಡಕ್ಕೆ ರೂ 11,000/- ಬಹುಮಾನ ವಿತರಣಾ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ ಸಮಾಜದ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗೋಸಾ ಕಲ್ಬುರ್ಗಿ, ಎಸ್.ಎಸ್.ಕೆ ಬ್ಯಾಂಕಿನ ಚೇರ್ಮನರಾದ ವಿಠ್ಠಲ ಲದವಾ, ಕೆಪಿಸಿಸಿ ಸದಸ್ಯರಾದ ಸತೀಶ್ ಮೇಹರವಾಡೆ, ಮಾಜಿ ಶಾಸಕ ರಾದ ಅಶೋಕ ಕಾಟವೆ, ಕೆ.ಪಿ ಪೂಜಾರಿ, ಕೆ.ಟಿ. ಪವಾರ, ನಾಗೇಂದ್ರಸಾ ಸೋಳಂಕಿ, ಎನ್. ಆರ್. ಹಬೀಬ, ಕಾಶಿನಾಥ ಖೋಡೆ, ದೀಪಕ ಮಗಜಿಕೊಂಡಿ, ವಿರು ಕಠಾರೆ, ಸುಭಾಷ್ ಭಾಂಡಗೆ, ವಿಜಯ ಕಲಬುರ್ಗಿ, ವಿನ್ನು ಹಬೀಬ, ವಿನಾಯಕ ಧೋ0ಗಡಿ, ರಾಜು ಜರತಾರಾಘರ್, ರಾಜು ಧರ್ಮದಾಸ, ವಿನಾಯಕ ಲದವಾ ಮುಂತಾದವರು ಉಪಸ್ಥಿತರಿದ್ದರು.