ಕ್ರಿಕೇಟ್ ಲೋಕದಲ್ಲಿ ಧೂಳೆಬ್ಬಿಸಿದ ಶಾಂತಿನಿಕೇತನ ಅಂತರಾಷ್ಟ್ರೀಯ ಶಾಲೆಯ ಬಾಲಕ

ವಿಜಯಪುರ, ಏ.9-ನಗರದ ಪ್ರತಿಷ್ಠಿತ ಸಂಸ್ಥೆಯಾದ ಶಾಂತಿನಿಕೇತನ ಅಂತರಾಷ್ಟ್ರೀಯ (ಸಿ.ಬಿ.ಎಸ್.ಇ.) ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾದ ಹರ್ಷ ಜೈನ ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯು ಹಮ್ಮಿಕೊಂಡ 14 ವರ್ಷದೊಳಗಿನ ಬಾಲಕರ ಕ್ರಿಕೇಟ್ ತಂಡದ ನಾಯಕ ಸ್ಥಾನವನ್ನು ವಹಿಸುವುದರ ಜೊತೆಗೆ 16 ವರ್ಷದೊಳಗಿನ ಬಾಲಕರ ಕ್ರಿಕೇಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ತನ್ನದೇಯಾದ ಛಾಪು ಮೂಡಿಸಿದ್ದಾನೆ.
ಈ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ.ಸುರೇಶ ಬಿರಾದಾರ ಹಾಗೂ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಎಸ್.ಬಿರಾದಾರ. ಪ್ರಾಂಶುಪಾಲರಾದ ಚಂದನಗೌಡ ಮಾಲಿಪಾಟೀಲ ಹಾಗೂ ಬೋಧಕ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಕ್ರೀಡಾಲೋಕದ ಭವಿಷ್ಯವು ಉಜ್ವಲವಾಗಿರಲೆಂದು ಎಲ್ಲರೂ ಶುಭ ಹಾರೈಸಿದ್ದಾರೆ