ಕ್ರಿಕೇಟ್ ಪ್ರಥಮ ಸ್ಥಾನ

ಹಿರಿಯೂರು.ಮಾ.14-ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ  ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ   ಚಿತ್ರದುರ್ಗ ಜಿಲ್ಲಾ ಮಟ್ಟದ ಹೆಣ್ಣು ಮಕ್ಕಳ ಕ್ರಿಕೆಟ್ ಪಂದ್ಯಾವಳಿಯಲ್ಲಿ  ಫೈನಲ್ ಪಂದ್ಯದಲ್ಲಿ ಹಿರಿಯೂರು ತಂಡವು ಮೊಳಕಾಲ್ಮೂರು ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನ ಪಡೆದಿರುತ್ತದೆ.ವಿಜೇತ ತಂಡದ ಆಟಗಾರರಿಗೂ ಮತ್ತು ಶಿಕ್ಷಕರಿಗೂ ತಾಲೂಕು  ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮನೋಹರ ಅವರು ಮಾಂಟೆಸೋರಿ ಪ್ರೌಢಶಾಲೆಯ ಕಾರ್ಯದರ್ಶಿ ವೀರ ಕರಿಯಪ್ಪ ಅವರು ಹಾಗೂ ಮುಖ್ಯ ಶಿಕ್ಷಕರಾದ ನಾಗರಾಜ್ .ಟಿ.ವಿ ಅವರು ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.