ಕ್ರಿಕೇಟ್ ಪಂದ್ಯಾವಳಿ

ಹುಬ್ಬಳ್ಳಿ, ನ 25: ಅಂಜುಮನ್-ಎ-ಇಸ್ಲಾಂ ಹುಬ್ಬಳ್ಳಿಯ ನೆಹರೂ ಬಿಬಿಎ ಮತ್ತು ಬಿಸಿಎ ಕಾಲೇಜಿನ ವಿದ್ಯಾರ್ಥಿಗಳ ಕ್ರಿಕೇಟ್ ಪಂದ್ಯಾವಳಿ ನಡೆಯಿತು.
ಹತ್ತಕ್ಕಿಂತ ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಅಂತಿಮವಾಗಿ ಫೈನಲ್ ಪಂದ್ಯವು ಬಿಸಿಎ 1ನೇ ಸೆಮಿಸ್ಟರ್ ಮತ್ತು ಬಿಸಿಎ 5ನೇ ಸೆಮಿಸ್ಟರ್ ಮಧ್ಯೆ ಜರುಗಿ, ಬಿಸಿಎ 5ನೇ ಸೆಮಿಸ್ಟರ್ ತಂಡ ವಿಜಯ ಸಾಧಿಸಿತು.
ವಿಜೇತ ಹಾಗೂ ರನ್ನರ್‍ಅಪ್ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅಂಜುಮನ್-ಎ-ಇಸ್ಲಾಂ ಹುಬ್ಬಳ್ಳಿಯ ಉಪಾಧ್ಯಕ್ಷರಾದ ಅಲ್ತಾಫ್‍ನವಾಜ ಎಂ. ಕಿತ್ತೂರ, ಎಂ.ಎ. ಪಠಾಣ, ಹಜ್ಜುಖಾನ ಧಾರವಾಡ, ಮೊಹಮ್ಮದ ಕೋಳೂರ, ಇಮಾಮಹುಸೇನ ಮಡಕಿ, ಪ್ರಾಂಶುಪಾಲರಾದ ಜಾಕೀರಹುಸೇನ ಮತ್ತಿತರರು ಉಪಸ್ಥಿತರಿದ್ದರು.