ಕ್ರಿಕೆಟ್ ಹಿರಿಯೂರು ತಂಡಕ್ಕೆ ಪ್ರಥಮ ಬಹುಮಾನ 

ಹಿರಿಯೂರು.ಜ.14;  ಇಲ್ಲಿನ  ಛಾಯಾಗ್ರಾಹಕರ ಸಂಘದ ವತಿಯಿಂದ  ನೆಹರು ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿರಿಯೂರು ಛಾಯಾಗ್ರಾಹಕರ ತಂಡ ಪ್ರಥಮ ಬಹುಮಾನಗಳಿಸಿ ಜಯಭೇರಿ ಬಾರಿಸಿದೆ, ಸಮರೋಪ ಸಮಾರಂಭದಲ್ಲಿ  ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಪ್ರಥಮ ಬಹುಮಾನ 50,000 ನಗದು ಮತ್ತು ಆಕರ್ಷಕ ಟ್ರೋಫಿ ನೀಡಿದರು.  ದ್ವಿತೀಯ ಬಹುಮಾನವನ್ನು ಬೆಂಗಳೂರಿನ ದಾಸರಹಳ್ಳಿ ತಂಡ ಪಡೆದಿದ್ದು  30000 ನಗದು  ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಸಮಾರಂಭದಲ್ಲಿ ರಾಜ್ಯ ಪ್ರವರ್ಗ 1ರ ಒಕ್ಕೂಟದ ಅಧ್ಯಕ್ಷರಾದ ಡಿ ಟಿ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷರಾದ ಟಿ ಚಂದ್ರಶೇಖರ್, ಸಿಪಿಐ ಕೆ.ಆರ್ ರಾಘವೇಂದ್ರ, ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಎಂಎಲ್ ಗಿರಿಧರ್, ಸೂರ್ಯೋದಯ ಅಜೀಜ್, ವಿಜಯ್ ಕುಮಾರ್, ರಾಮಕೃಷ್ಣ, ಆಸ್ಗರ್ ಅಹಮದ್ ಅಬ್ದುಲ್ ನವೀದ್ ಸೇರಿದಂತೆ ಛಾಯಾಗ್ರಹಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.