ಕ್ರಿಕೆಟ್ ಯುವಕರಲ್ಲಿ ಬಾಂಧವ್ಯ ಹೆಚ್ಚಿಸುತ್ತದೆ: ನಿತಿನ್ ಗುತ್ತೇದಾರ್

ಕಲಬುರಗಿ:ಆ.27: ಕ್ರಿಕೆಟ್ ಪಂದ್ಯಾಟ ಯುವಕರ ನಡುವೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಇದರಿಂದ ಬಾಂಧವ್ಯ ಹೆಚ್ಚಾಗಿ ಸಾಮರಸ್ಯ ಮೂಡಲು ಪ್ರೇರಣೆಯಾಗುತ್ತಿದೆ ಎಂದು ಯುವ ಮುಖಂಡರಾದ ನಿತಿನ್ ವಿ. ಗುತ್ತೇದಾರ್ ಅವರು ಹೇಳಿದರು.
ದಕ್ಷಿಣ ಕನ್ನಡ ಸಂಘದ ವತಿಯಿಂದ ಸೆಪ್ಟೆಂಬರ್ ಮೂರರಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕೆಪಿಎಲ್ (ಕರಾವಳಿ ಪ್ರೀಮಿಯರ್ ಲೀಗ್ )ಕ್ರಿಕೆಟ್ ಪಂದ್ಯಾಟದ ಕ್ರೀಡಾಳುಗಳ ಜೆರ್ಸಿ ಬಿಡುಗಡೆ ಮಾಡಿ ಮಾತನಾಡಿದ ಅವರು ನಾನು ಕೂಡ ಕ್ರಿಕೆಟ್ ಪಟುವಾಗಿದ್ದು ಈ ಆಟದಿಂದ ಅನೇಕ ಪಂದ್ಯಗಳನ್ನು ಆಡಿದ್ದು ಇದು ಯುವಕರಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಮೂಡಿಸುವುದಾರೊಂದಿಗೆ ಯುವಕರ ಮಧ್ಯೆ ಬಲಿಷ್ಠ ಶಕ್ತಿಯನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿದೆ. ಗುತ್ತೇದಾರ್ ಕ್ಲಬ್ ಮೂಲಕ ಅನೇಕ ಪಂದ್ಯಾಟಗಳನ್ನು ನಡೆಸಿ ಹೈದರಬಾದ್, ಕಲ್ಬುರ್ಗಿ ಭಾಗದಲ್ಲಿ ಹೆಸರನ್ನು ಮಾಡಲಾಗಿದೆ. ದಕ್ಷಿಣ ಕನ್ನಡ ಸಂಘವು ಇಂತಹ ಪಂದ್ಯಾಟವನ್ನು ಏರ್ಪಡಿಸಿ ಸಂಘದ ಸುಮಾರು ಎಪ್ಪತ್ತರಷ್ಟು ಕ್ರೀಕೆಟ್ ಪಟುಗಳು ಒಟ್ಟಾಗಿ ಅರ್ಥಪೂರ್ಣ ವಾಗಿ ಕರಾವಳಿ ಪ್ರೀಮಿಯರ್ ಲೀಗ್ ನಲ್ಲಿ ಸ್ಪರ್ಧೆ ಮಾಡುತ್ತಾ ಇರುವುದು ಉತ್ತಮ ಬೆಳವಣಿಗೆ ಮತ್ತು ಅರ್ಥಪೂರ್ಣ ಕೆಲಸವಾಗಿದೆ. ದ.ಕ.ಕ್ರಿಕೆಟ್ ಪಂದ್ಯಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದರಲ್ಲದೆ ಇದರಿಂದ ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸಿ ಉತ್ತೇಜನ ನೀಡಲಾಗುತ್ತಿರುವುದು ಶ್ಲಾಘನೀಯ ಕೆಲಸ. ಸಂಘದ ಅನೇಕ ಕಾರ್ಯಕ್ರಮಗಳನ್ನು ಗಮನಿಸುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೋತ್ಸವ ಎಲ್ಲವೂ ಕೂಡ ಶಿಸ್ತು ಹಾಗೂ ಬದ್ಧತೆಯಿಂದ ನಡೆಯುತ್ತಿರುವುದು ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ಹೇಳಿದರು.
ಈ ಪಂದ್ಯಾಟದಲ್ಲಿ ಕಿರಣ್ ಜತ್ತನ್ ನೇತೃತ್ವದ ಉಡುಪಿ ಸೂಪರ್ ಕಿಂಗ್ಸ್, ನರಸಿಂಹ ಮೆಂಡನ್ ನೇತೃತ್ವದ ಕುಂದಾಪುರ ವಾರಿಯರ್ಸ್, ದಯಾನಂದ ಪೂಜಾರಿ ನೇತೃತ್ವದ ಕಲಬುರ್ಗಿ ಟೈಟಾನ್ಸ್ ,ಮಹಾ ಕೀರ್ತಿ ಶೆಟ್ಟಿ ನೇತೃತ್ವದ ಕುಡ್ಲ ಚಾಲೆಂಜರ್ಸ್ ತಂಡಗಳು ಸ್ಪರ್ಧೆಗೆ ಸಜ್ಜಾಗಿದ್ದು ಕ್ರೀಡಾಳುಗಳಿಗೆ ಬೇಕಾದ ಜೆರ್ಸಿಗಳನ್ನು ನಿತಿನ್ ಗುತ್ತೇದಾರ್ ಅವರು ತಂಡದ ಮುಖ್ಯಸ್ಥರಿಗೆ ನೀಡಿದರು. ಅಲ್ಲದೆ ಬಾಲ್ ಮತ್ತು ಬ್ಯಾಟ್ ಗಳನ್ನೂ ಹಸ್ತಾಂತರಿಸಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮಾತನಾಡಿ ಸಂಘವು 58ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು ಪ್ರತಿ ವರ್ಷವೂ ಅತ್ಯಧಿಕ ಸಂಖ್ಯೆಯ ಕ್ರಿಕೆಟ್ ಪಟುಗಳು ಸ್ಪರ್ಧೆಗೆ ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಪ್ರಶಾಂತ ಶೆಟ್ಟಿ ಇನ್ನಾ ಮಾತನಾಡಿ ಸೆಪ್ಟೆಂಬರ್ ಮೂರರ ಕ್ರಿಕೆಟ್ ಪಂದ್ಯಾಟ, ಸೆಪ್ಟೆಂಬರ್ ಹತ್ತರ ಕ್ರೀಡೋತ್ಸವ ಹಾಗೂ ಸೆಪ್ಟೆಂಬರ್ 19ರ ಗಣೇಶೋತ್ಸವ ಆಚರಣೆಗೆ ಸದಸ್ಯರು ಸಂಪೂರ್ಣ ಸಹಕಾರ ನೀಡಿ ಯಶಸ್ಸು ಗೊಳಿಸುವಂತೆ ಮನವಿ ಮಾಡಿದರು .ಕ್ರೀಡಾ ಕಾರ್ಯದರ್ಶಿ ಮಹಾಕೀರ್ತಿ ಶೆಟ್ಟಿ ಮಾತನಾಡಿ ಸೆಪ್ಟೆಂಬರ್ ಮೂರರಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಸ್ಪರ್ಧೆ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗಲಿದ್ದು ಪಂದ್ಯಾಟವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ವಿನಯ್ ಪಾಟೀಲ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಕ್ರಿಕೆಟ್ ಪಂದ್ಯಾಟಕ್ಕೆ ಜೀವನ್ ಕುಮಾರ್ ಜತ್ತನ್ ಪಂದ್ಯಾಟದ ಮುಖ್ಯ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದು ಸಲಹೆ ಸೂಚನೆ ನೀಡಿದರು. ಕ್ರೀಡಾ ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಅವರು ಎಲ್ಲಾ ಕ್ರಿಕೆಟ್ ಪಟುಗಳಿಗೆ ವಿತರಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು .ಈ ಕಾರ್ಯಕ್ರಮದಲ್ಲಿ ಪೂರ್ಣಾನಂದ ಭಟ್ ,ಮುರಳಿದರ ಭಟ್, ಸತ್ಯಾನಂದ ಮೂಡಬಿದ್ರೆ, ಸುದರ್ಶನ್ ಜತ್ತನ್, ಹರ್ಷ ಗ್ರೂಪ್ ನ ರಾಘವೇಂದ್ರ, ರಕ್ಷಕ್ ಕುಂದಾಪುರ, ಚಂದ್ರಶೇಖರ ಶೆಟ್ಟಿ ಪ್ರಭಾಕರ ಉಪಾಧ್ಯಾಯ, ಸತೀಶ್ ಪೂಜಾರಿ, ಸುದೀಪ್ತ ಭಟ್,ಸುಧಾಕರ ಶೆಟ್ಟಿ, ವಿಲಾಸ್, ರಾಜು, ಪ್ರಖ್ಯಾತ್ ಶೆಟ್ಟಿ ,ದೇವೇಂದ್ರ
ಹಿರೇಮಠ, ಹಾಜರಿದ್ದರು. ಕಾರ್ಯದರ್ಶಿ ಪುರಂದರ ಭಟ್ ನಿರೂಪಣೆ ಮಾಡಿದರು. ಶ್ರೀಮತಿ ಪೂನಂ ವಿಲಾಸ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ರಾಮಕೃಷ್ಣ ಕೆದಿಲಾಯ ಧನ್ಯವಾದವಿತ್ತರು.