ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿ ಸೆರೆ

ಬೆಂಗಳೂರು,ಏ.೨೦-ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಬುಕ್ಕಿಯೊಬ್ಬನನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ೮೬ ಸಾವಿರ ನಗದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿಯ ಜುಸೆಬ್ ಯೂನಿಸ್ ಅಲಿಯಾಸ್ ಇಮ್ರಾನ್ (೪೬) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ೮೬ ಸಾವಿರ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಬಾಣಸವಾಡಿಯ ಹೆಚ್‌ಆರ್ ಬಿಆರ್ ಲೇಔಟ್ ನ ೨ನೇ ಬ್ಲಾಕ್ ಬಳಿ ಆರೋಪಿಯು ಚೈನ್ನೈ ಸೂಪರ್ ಕಿಂಗ್ಸ್ ಚೈನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಹಾಗೂ ಮರುದಿನ ನಡೆಯಬೇಕಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸೋಲು ಮತ್ತು ಗೆಲುವಿನ ಬಗ್ಗೆ ಬುಕ್ಕಿಗಳಿಂದ ಮತ್ತು ಮೊಬೈಲ್ ಪೋನ್‌ನ ವಿವಿಧ ಆಪ್‌ಗಳ ಮೂಲಕ ಬೆಟ್ಟಿಂಗ್ ಸರಾಸರಿಯನ್ನು ನೋಡಿಕೊಂಡು ಬೆಟ್ಟಿಂಗ್
ಜೂಜಾಟ ಆಡಿಸುತ್ತಿದ್ದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದರು.