ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಕಡಿವಾಣ ಪಿಎಸ್ ಐ ಸುನಿಲ್

ಹರಿಹರ.ಏ.24;  ನಗರದ ಕೆಲವು ಕಡೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದವರ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ನಗರ ಠಾಣೆಯಲ್ಲಿ ನಡೆದಿದೆ ಖಚಿತ ಮಾಹಿತಿ ಮೇರೆಗೆ ನಗರದ ಕರ್ನಾಟಕ ಬ್ಯಾಂಕ್ ಎದುರು ಗಾಂಧಿನಗರದ 3 ನೇ ಕ್ರಾಸಿನಲ್ಲಿ ಅಫ್ತಾಬ್ (20) ವಾಸಿಮ್ (27) . ಸೈಯದ್ ಅನ್ವರ್ (20), ಆಸಿಫ್ (24)  ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ 9700 ರೂ ನಗದು 3ಮೊಬೈಲ್ 4ಸಿಮ್ ಕಾರ್ಡುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ನಗರ ಠಾಣೆಯಲ್ಲಿ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗಿದೆ ಎಂದು ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಹೇಳಿದರು ನಂತರ ಮಾತನಾಡಿದ ಅವರು ಐಪಿಎಲ್ ಕ್ರಿಕೆಟ್ ಮಟ್ಕಾ  ಇಸ್ಪೇಟ್ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ ಮತ್ತು ಈಗಾಗಲೇ ಐಪಿಎಲ್ ಕ್ರಿಕೆಟ್ ಕ್ರಿಕೆಟ್ ಪ್ರಾರಂಭವಾಗಿದ್ದು ಇದನ್ನ ಕ್ರೀಡೆಯನ್ನಾಗಿ ನೋಡಿ ಸ್ವೀಕರಿಸಿ ಕ್ರೀಡಾಪಟುಗಳ ಆಗುವುದನ್ನು ಬಿಟ್ಟು ಜೂಜಾಟಕ್ಕೆ ದಾಸರಾಗುತ್ತಿರುವುದು ಇದು ಸರಿಯಾದ ಬೆಳವಣಿಗೆ ಅಲ್ಲ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರ ನೀಡಬೇಕು ಇಂಥ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳದೆ ಕಡಿವಾಣ ಹಾಕೋದಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಮುಂದೆ ಇವರ ಭವಿಷ್ಯ ರೂಪಿಸಿಕೊಳ್ಳದೆ ದುಶ್ಚಟಕ್ಕೆ ಜೂಜಾಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಮೊದಲೇ ಯುವಕರು ಎಚ್ಚೆತ್ತುಕೊಳ್ಳಬೇಕು ಪೋಷಕರು ಮಕ್ಕಳಿಗೆ ಉತ್ತಮವಾದ ಸಂಸ್ಕೃತಿ ಸಂಸ್ಕರಣೆ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವುದಕ್ಕೆ ಗಮನವಹಿಸಬೇಕು ಎಂದರು. 
ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ ಹನಮಂತರಾಯ, ಗ್ರಾಮಾಂತರ ಉಪ ವಿಭಾಗದ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ, ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ಇವರುಗಳ ಮಾರ್ಗದರ್ಶನದಲ್ಲಿ  ಪಿಎಸ್ ಐ ಸುನಿಲ್ ಬಸವರಾಜ ತೇಲಿ .ಅಪರಾಧ ವಿಭಾಗದ ಪಿಎಸ್ ಐ ಲತಾ ತಾಳೇಕರ್ .ನೇತೃತ್ವದಲ್ಲಿ ಲಿಂಗರಾಜ್. ದ್ವಾರಕೀಶ್ .ಸತೀಶ್ ಟಿ ವಿ. ಶಿವರಾಜ್. ದೇವರಾಜ್ .ನಾಗರಾಜ್ ಸುಣಗಾರ .ಕರಿಯಪ್ಪ ನಿಟ್ಟೂರು .ಸಿದ್ದರಾಜ್. ತಿಪ್ಪೇಶ್ .ಸಿಬ್ಬಂದಿ ವರ್ಗದವರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಒಸಿ ಇಸ್ಪೇಟ್ ಇನ್ನೂ ಇತರೆ ಅಪರಾಧ ಪ್ರಕರಣಗಳ ಕಾರ್ಯಾಚರಣೆಯಲ್ಲಿ  ಇದ್ದರು.