ಕ್ರಿಕೆಟ್ ಪತ್ರಕರ್ತರ ತಂಡಕ್ಕೆ ಭರ್ಜರಿ ಗೆಲುವು

ವಿಜಯಪುರ:ನ.25: ಜಿಲ್ಲಾ ಪಂಚಾಯತ ಹಾಗೂ ಪತ್ರಕರ್ತರ ಸಂಘದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತ ಸಂಘದವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪಂಚಾಯತ ಆವರಣದಲ್ಲಿ ಗುರುವಾರ ನಡೆದ ಮ್ಯಾಚ್‍ನಲ್ಲಿ ಟಾಸ್ ಗೆದ್ದು ಪತ್ರಕರ್ತರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 8 ಓವರ್‍ನಲ್ಲಿ ಭರ್ಜರಿ 89 ಕಲೆ ಹಾಕಿತ್ತು. ಇದನ್ನು ಬೆನ್ನಟ್ಟಿದ ಜಿಲ್ಲಾ ಪಂಚಾಯತ ತಂಡ ಕೇವಲ 61 ರನ್ ಗಳಿಸಿ 28 ಸೋಲು ಕಂಡಿತ್ತು. ಗೆಲುವಿನ ಬಳಿಕ ಮಾಧ್ಯಮ ಮಿತ್ರರು ಕುಣಿದು ಕುಪ್ಪಳಿಸಿದರು.
ಅಲ್ಲದೇ, ಕ್ರೀಡಾಸ್ಪೂರ್ತಿಯಿಂದ ಎಲ್ಲರೂ ಆಟವಾಡಿದ್ದು ಖುಷಿಯ ಸಂಗತಿ. ಎಲ್ಲರೂ ಉತ್ತಮ ಆಟವಾಡಿದರು. ರಾಜು ಹಾಫ್ ಸೆಂಚೂರಿ ಬಾರಿಸಿದ್ರೆ ರುದ್ರೇಶ್ ಮುರನಾಳ, ಸುನೀಲ್ ಭಾಸ್ಕರ್ ಬ್ಯಾಟಿಂಗ್ ಆಕರ್ಷಕವಾಗಿತ್ತು.
ಇನ್ನೂ ಬೌಲಿಂಗ್ ಮಾಡಿದ ಸುನೀಲ್ ಕಾಂಬಳೆ, ಅಮೀತ್, ಶಿವಾನಂದ, ರಾಜೂ ಉತ್ತಮ ಪ್ರದರ್ಶನ ನೀಡಿದರು. ಪೀಲ್ಡಿಂಗ್ ವಿಭಾಗದಲ್ಲಿ ಎಲ್ಲರೂ ಚುರುಕಿನ ಪ್ರದರ್ಶನ ನೀಡಿದರು. ಒಂದೇ ಕೈಯ್ಯಲ್ಲಿ ಕ್ಯಾಚ್ ಹಿಡಿದ ಅಮೀರ್ ಗಮನ ಸೆಳೆದರು. ನಾಲ್ಕು ಕ್ಯಾಚ್ ಹಿಡಿದ ಈರಣ್ಣ ಆವಟಿ ಪ್ರದರ್ಶನ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪಾತ್ರರಾದರು.