ಕ್ರಿಕೆಟ್ ಪಂದ್ಯಾವಳಿ, ಹುಕ್ಕೇರಿಗೆ ವಕೀಲರ ತಂಡ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೨೦: ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಪ್ರಥಮ ಬಾರಿಗೆ ರಾಯಲ್ ಲಾರ‍್ಸ್ ವತಿಯಿಂದ ನಡೆಸಲಾಗುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ದಾವಣಗೆರೆ ಜಿಲ್ಲಾ ವಕೀಲರ ತಂಡ ಹುಕ್ಕೇರಿಗೆ ತೆರಳಿತು.ತಂಡದ ನಾಯಕನಾಗಿ ಅಜಯ್, ಉಪನಾಯಕನಾಗಿ ಬಿ.ಹೆಚ್.ಮಂಜುನಾಥ್, ರಾಜು, ಅರುಣ್, ಕೆ.ಪಿ.ಮಂಜುನಾಥ್, ತಿರುಕಪ್ಪ, ರಮೇಶ್, ಹರೀಶ್, ಹನುಮಂತಪ್ಪ, ಗುರು, ಶಶಿ, ಕರಿಬಸಪ್ಪ, ಉತ್ತುಂ ಶಾ, ಲಕ್ಷö್ಮಣ್ ನಾಯ್ಕ, ವೆಂಕಟೇಶ್ ಹಾಗೂ ಗೋವಿಂದ, ತರಬೇತುದಾರರಾಗಿ ಪಿ.ವಿ.ಶಿವಕುಮಾರ್ ತೆರಳಿದ್ಧಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಜಿಲ್ಲಾವಕೀಲರ ಸಂಘವು ಶುಭ ಕೋರಿ ಬೆಳಗಾವಿಗೆ ಬೀಳ್ಕೊಟ್ಟಿದೆ. ಈ ವೇಳೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್.ಅರುಣಕುಮಾರ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ವಕೀಲರಾದ ಆನಂದಪ್ಪ, ಜ್ಯೋತಿ, ಯೋಗೇಶ್ವರಪ್ಪ ಇತರರು ಇದ್ದರು.