
ಧಾರವಾಡ,ಏ.10: ಜರ್ನಲಿಸ್ಟ್ ಗಿಲ್ಡ್‍ನ ಪಂಚಿಂಗ್ ಸ್ಟಾರ್ಸ್ ಮತ್ತು ರೈಸಿಂಗ್ ಸ್ಟಾರ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ಪಂಚಿಂಗ್ ಸ್ಟಾರ್ಸ್ ತಂಡ ಸುಲಭವಾಗಿ 7 ವಿಕೆಟ್‍ಗಳ ಅಂತರದಿಂದ ಜಯ ತನ್ನದಾಗಿಸಿಕೊಂಡಿತು.
ಇಲ್ಲಿನ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಘಟ್ ಬಾಲ್ ಮೈದಾನದಲ್ಲಿ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ರೈಸಿಂಗ್ ಸ್ಟಾರ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ರೈಸಿಂಗ್ ಸ್ಟಾರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬಸವರಾಜ ಹಿರೇಮಠ 26(15) ಮತ್ತು ಫಯಾಜ್ ಮುಖ್ಯ 6(4) ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ ಎರಡು ಓವರ್‍ಗಳಲ್ಲಿ 32ರನ್ ಗಳನ್ನು ಗಳಿಸಿ ಉತ್ತಮ ಆರಂಭ ನೀಡಿದರು. ಹೀಗೆ ಒಟ್ಟು 8 ಓವರಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ತಂಡ
71 ರನ್ ಗಳ ಮೊತ್ತ ದಾಖಲಿಸಿತು. ನಂತರ ಗುರಿ ಬೆನ್ನಟ್ಟಿದ ಪಂಚಿಂಗ್ ಸ್ಟಾರ್ಸ್ ತಂಡ ಕೇವಲ 6 ಓವರಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಪರವಾಗಿ ಮಲ್ಲಿಕಾರ್ಜುನ ಬಾಳನಗೌಡರ 6 (9) ಹಾಗೂ ರಾಯಸಾಬ ಅನಸರಿ 18 ಎಸೆತಗಳಲ್ಲಿ 48 ರನ್ ಗಳನ್ನು ಚಚ್ಚುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಿಂಗ್ ಸ್ಟಾರ್ಸ್ ಆಟಗಾರರ ಹೊಡೆತಕ್ಕೆ ರೈಸಿಂಗ್ ಸ್ಟಾರ್ಸ್ ಬೌಲ ಗಳು ಸುಸ್ತಾದರು.
ಬೌಲಿಂಗ್‍ನಲ್ಲಿ ಪಂಚಿಂಗ್ ಸ್ಟಾರ್ಸ್ ತಂಡದ ಪರ ರಾಯಸಾಬ ಅನಸರಿ 2 ವಿಕೆಟ್ ಕಿತ್ತರೇ, ರೈಸಿಂಗ್ ಸ್ಟಾರ್ಸ್ ತಂಡದ ರವೀಶ್ ಪವಾರ, ಮಂಜುನಾಥ ಅಂಗಡಿ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.