ಕ್ರಿಕೆಟ್ ಪಂದ್ಯಾವಳಿ
ಪತ್ರಕರ್ತರ ವಿರುದ್ದ ಪೊಲೀಸರಿಗೆ ಜಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.29: ಕ್ರೀಡೆಗಳಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಎಸ್ಪಿ ಸೈದುಲ  ಅಡಾವತ್ ಅವರು ಹೇಳಿದರು.
ಅವರು ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದು  ಪತ್ರಕರ್ತರ ಹಾಗೂ ಪೊಲೀಸ್ ಅಧಿಕಾರಿಗಳ  ನಡುವೆ ಹಮ್ಮಿಕೊಂಡಿದ್ದ  ಕ್ರಿಕೆಟ್  ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಕ್ರೀಡೆಗಳಿರಲಿ ಭಾಗವಹಿಸುವುದು ಮುಖ್ಯ, ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ, ಎರಡನ್ನೂ ಸ್ಪರ್ಧಾಳುಗಳು ಸಮಾನವಾಗಿ ಸ್ವೀಕರಿಸಬೇಕೆಂದರು
ನಂತರ ಟಾಸ್ ಗೆದ್ದುಕೊಂಡ ಪತ್ರಕರ್ತರ ತಂಡ ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡಿತು. 10 ಓವವರ್ ಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಎರಡು ವಿಕೇಟ್ ನಷ್ಟಕ್ಕೆ 91ರನ್ ಗಳನ್ನು ಪಡೆಯಿತು.
ಪೊಲೀಸ್ ಅಧಿಕಾರಿಗಳ ತಂಡ ಎರಡು ವಿಕೆಟ್‌ ನಷ್ಟಕ್ಕೆ 92ರನ್ ಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿತು.  ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಶೇಖರಪ್ಪ, ಮಲ್ಲೇಶ್ ದೊಡ್ಡಮನಿ, ಸಿಪಿಐಗಳಾದ ನಿರಂಜನ್, ಸುಭಾಷ್ ಚಂದ್ರ, ಷಣ್ಮುಖಪ್ಪ, ವಾಸು ಕುಮಾರ್, ಚಂದನ್ ಗೋಪಾಲ್ ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷಾ, ಉಪಾಧ್ಯಕ್ಷ ಬಜಾರಪ್ಪ, ಜಿಲ್ಲಾ ಖಜಾಂಚಿ ನಾಗರಾಜ್, ಸಂಘದ ಪದಾಧಿಕಾರಿಗಳಾದ ಎಂ.ಜಂಬುನಾಥ್, ವೆಂಕಟೇಶ ದೇಸಾಯಿ, ಶ್ರೀನಿವಾಸ್, ಬಸವರಾಜ್ ಹಾರನಹಳ್ಳಿ, ಶಿವು, ಎಂ.ಇ.ಜೋಶಿ,  ಗುರುಶಾಂತ್, ಲುಕ್ಮಾನ್, ಮುರುಳಿ, ಮಲ್ಲಿಕಾರ್ಜುನ, ಸೇರಿದಂತೆ ಇತರರು ಉಪಸ್ಥಿತರಿದ್ದರು