ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಚಾಲನೆ

ಅಥಣಿ : ಜು.22:ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಸದೃಢ ದೇಹಕ್ಕೆ ಕ್ರೀಡೆಗಳು ಸಹಕಾರಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ.ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಸದೃಢ ಆರೋಗ್ಯ ಹೊಂದಬೇಕು, ಸದೃಢ ಆರೋಗ್ಯ ಹೊಂದಲು ಕ್ರೀಡೆಗಳು ಅಗತ್ಯವಾಗಿವೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು
ಅವರು ತಾಲೂಕಿನ ರಾಮತೀರ್ಥ ಕ್ರಾಸ್ ದಲ್ಲಿ ಡೊಂಗರಗಾಂವ ಕ್ರಿಕೆಟ್ ಕ್ಲಬ್ ವತಿಯಿಂದ
ಕೊಹಳ್ಳಿ, ಐಗಳಿ, ಬಾವನ್ ದಡ್ಡಿ, ಕೆಸ್ಕರ್ ದಡ್ಡಿ, ರಾಮತೀರ್ಥ, ಕಕಮರಿ ಈ ಗ್ರಾಮಗಳ ಮದ್ಯದಲ್ಲಿ ಯುವಕರಿಂದ ಆಯೋಜಿಸಲಾದ ಟೆನ್ನಿಸ್ ಬಾಲ್ ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಮುಖಂಡ ಸದಾಶಿವ ಬುಟಾಳಿ ಅವರೊಂದಿಗೆ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು ಈ ಪಂದ್ಯಾವಳಿಗಳು ಸತತ 5 ದಿನಗಳವರೆಗೆ ನಡೆಯಲಿದ್ದು ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು ಪ್ರಥಮ ಬಹುಮಾನ 30 ಸಾವಿರ ಎರಡನೆಯ ಬಹುಮಾನ 20 ಸಾವಿರ ಮೂರನೇ ಬಹುಮಾನ 10 ಸಾವಿರ ರೂಪಾಯಿಗಳನ್ನು ನೀಡಲಾಗುವದು ಎಂದ ಅವರು ಈ ಪಂದ್ಯಾವಳಿಗಳನ್ನು ನಡೆಸಲು ಸ್ಥಳಾವಕಾಶ ಮಾಡಿ ಕೊಟ್ಟ ಸದಾಶಿವ ಬುಟಾಳಿ ಅವರಿಗೆ ಮಾಜಿ ಶಾಸಕ ಡೊಂಗರಗಾಂವ ಅವರು ಕ್ರೀಡಾಪಟುಗಳು ಹಾಗೂ ತಮ್ಮ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಸದಾಶಿವ ಬುಟಾಳಿಯವರು ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಗಳಲ್ಲಿ ಯುವಕರು ತಮ್ಮ ವ್ಯವಸಾಯದ ಜೊತೆಗೆ ಇಂತಹ ಪಂದ್ಯಾವಳಿಗಳ ಮೇಲೆ ಒತ್ತು ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಅಶೋಕ್ ಕೊಡಗ, ಶಿವಗೊಂಡ ಮುಧೋಳ, ನೂರಅಹಮದ ಡೊಂಗರಗಾಂವ, ಮೈನೋದ್ದಿನ ಡೊಂಗರಗಾಂವ, ಬಾಳು ಸರಗರ, ಮಹಾದೇವ ಮರಗಾಳೆ, ಶೌಕತಅಲಿ ಡೊಂಗರಗಾಂವ, ಪೂಜಾರಿ ಮೆಡಿಕಲ್ ಸ್ಟೋರ್, ಸಂಗಮೇಶ್ವರ ಜನರಲ್ ಸ್ಟೋರ, ದಿಲೀಪ ಮರಗಾಳೆ, ಬದ್ರುದ್ದೀನ್ ಡೊಂಗರಗಾಂವ, ಗೌಡಪ್ಪ ಬಿರಾದರ, ಅಶ್ಕರ್ ಡೊಂಗರಗಾಂವ, ನಜೀರ್ ಡೊಂಗರಗಾಂವ, ರಿಯಾಜ್ ಡೊಂಗರಗಾಂವ, ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.