ಕ್ರಿಕೆಟ್ ದಿಗ್ಗಜರ ಪಂದ್ಯಾವಳಿ

ಚಿಕ್ಕಬಳ್ಳಾಪುರ,ಜ೧೯:ಒಂದು ಜಗತ್ತು-ಒಂದು ಕುಟುಂಬ? ಘೋಷ ವಾಕ್ಯದಡಿ ಶ್ರೀ ಸದ್ಗುರು ಮಧುಸೂದನಸಾಯಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಪಂದ್ಯಾವಳಿ ನಡೆಯಿತು.
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ ನ ಲೋಕಾರ್ಪಣೆ ಅಂಗವಾಗಿ “ ಒಂದು ಜಗತ್ತು ಹಾಗೂ ಒಂದು ಕುಟುಂಬ” ಎಂಬ (ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್) ಘೋಷ ವಾಕ್ಯದಡಿ ಟಿ.೨೦ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.
ಸಾಯಿಕೃಷ್ಣನ್ ಕ್ರೀಡಾಂಗಣವನ್ನು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಸದ್ಗುರು ಮಧುಸೂದನಸಾಯಿ ಜೊತೆ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಲೋಕಾರ್ಪಣೆ ಮಾಡಿದರು.
ಟೂರ್ನಿಯಲ್ಲಿ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದಡಿ ೮ ದೇಶಗಳ ೨೪ ಮಂದಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು.ಟಾಸ್ ಗೆದ್ದ ಒನ್ ವರ್ಲ್ಡ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡ ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಯುವಿ ನಾಯಕತ್ವದ ಒನ್ ಫ್ಯಾಮಿಲಿ ತಂಡ ೨೦ ಒವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೮೦ ರನ್ ಗಳನ್ನ ಗಳಿಸಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡಕ್ಕೆ ೧೮೧ ರನ್ ಗಳ ಗುರಿ ನೀಡಲಾಗಿತ್ತು.೧೮೧ ರನ್‌ಗಳ ಗುರಿ ಬೆನ್ನತ್ತಿದ್ದ ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡ ೧೯.೫ ಓವರ್‌ಗಳಲ್ಲೇ ೧೮೪ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ವಸುಧೈವ ಕುಟುಂಬಕಂ ಅನ್ನೋ ಮಾತಿಗೆ ಸಾಕ್ಷಿಭೂತವೆಂಬಂತೆ ಭಾರತದ ಸನಾತನ ಸಂಸ್ಕೃತಿ ಹಾಗೂ ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರುವ ಸಲುವಾಗಿ ಈ ಒಂದು ಟೂರ್ನಿಯನ್ನ ಆಯೋಜನೆ ಮಾಡಲಾಗಿತ್ತು.
ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ಅತ್ಯಂತ ಶಿಸ್ತು ಬದ್ಧವಾದ ವಾತಾವರಣವನ್ನು ಮೂಡಿಸಲಾಗಿತ್ತು ಎಲ್ಲೆಲ್ಲೂ ಬಿಳಿಯ ಉಡುಗೆಗಳನ್ನು ಧರಿಸಿದ ಆಶ್ರಮದ ಭಕ್ತರುಗಳು ಹಾಗೂ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದು ಗಮನಸೆಳೆದಿತ್ತು.
ಕೇವಲ ದೂರದರ್ಶನಗಳಲ್ಲಿ ಮಾತ್ರ ಕಾಣುತ್ತಿದ್ದ ಕ್ರಿಕೆಟ್ನ ಪ್ರಖ್ಯಾತರು ಈಗ ಕಣ್ಣು ಮುಂದೆ ಕಾಣುತ್ತಿತ್ತು ಕೆಲವರಲ್ಲಿ ಧನ್ಯತಾಭಾವ ಮೂಡಿಸಿತ್ತು.