ಕ್ರಿಕೆಟ್ ಟೂರ್ನಿ: ವಿಜೇತ ತಂಡಕ್ಕೆ ಬಹುಮಾನ ವಿತರಣೆ

ಚಿಕ್ಕನಾಯಕನಹಳ್ಳಿ, ನ. ೧೨- ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಬಿಬಿಸಿಎಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಅಮೃತ ಗಾರ್ಡನ್ ಡಾಬಾ ಮಾಲೀಕತ್ವದ ಯದುಕುಮಾರ್ ಮತ್ತು ಲೋಹಿತ್ ನೇತೃತ್ವದ ವೈ.ಎಲ್ ಯಾಕರ್ಸ್ ತಂಡ ಪ್ರಥಮ ಬಹುಮಾನ ಪಡೆಯಿತು.
ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದ ಕ್ರಿಕೆಟ್ ಅಭಿಮಾನಿಗಳು ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ೬ ತಂಡಗಳು ಭಾಗವಹಿಸಿದ್ದವು.
ಐಪಿಎಲ್ ಮಾದರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ೬ ತಂಡಗಳು ೧೧ಕ್ಕೂ ಹೆಚ್ಚು ಪಂದ್ಯವನ್ನಾಡಿವೆ. ಪ್ರಥಮ ಬಹುಮಾನ ಪಡೆದ ವೈ.ಎಲ್. ಯಾಕರ್ಸ್ ತಂಡ ೩೩೩೩೩ ರೂ. ನಗದು ಹಾಗೂ ಟ್ರೋಫಿ ಹಾಗೂ ದ್ವಿತೀಯ ಬಹುಮಾನ ಪಡೆದ ಆರಾಧ್ಯ ಇಲವೆನ್ ತಂಡ ೧೬೬೬೬ ನಗದು ಹಾಗೂ ಟ್ರೋಫಿ ಪಡೆದುಕೊಂಡಿದೆ.
ವಿಜೇತ ತಂಡಗಳಿಗೆ ಬಹುಮಾನವನ್ನು ಭಾರತ ವಾಲಿಬಾನ್ ತಂಡದ ನಾಯಕ ಮಧುಕಾರ್ತಿಕ್ ವಿತರಿಸಿದರು.
ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸರಣಿ ಪಂದ್ಯ ಶ್ರೇಷ್ಠವನ್ನು ರವಿಕುಮಾರ್ ಹಾಗೂ ಉತ್ತಮ ಬ್ಯಾಟ್ಸ್‌ಮನ್ ಪ್ರದರ್ಶನ ನೀಡಿದ ಸಂದೀಪ್ ಹಾಗೂ ಸರಣಿಯಲ್ಲಿ ಉತ್ತಮ ಬೋಲಿಂಗ್ ಪ್ರದರ್ಶನ ನೀಡಿದ ಧೃವಕುಮಾರ್ ಅವರಿಗೂ ಬಹುಮಾನ ನೀಡಲಾಯಿತು.