ಕ್ರಿಕೆಟ್ ಟೂರ್ನಾಮೆಂಟ್ ಗೆ ಆಯ್ಕೆ

ಕಲಬುರಗಿ,ಮಾ.20-ನಗರದ ಕೆ.ಬಿ.ಎನ್. ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್-16 ರಾಯಚೂರು ವಲಯ ಮಟ್ಟದ ಕ್ರಿಕೇಟ್ ಆಯ್ಕೆ ಸಮಿತಿಯಲ್ಲಿ ಜಿಲ್ಲೆಯಿಂದ ನಗರದ ದಾಮೋದರ ರಘೋಜಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ರೋಹಿತ್ ಮಹೇಶ್ ಪಾಟೀಲ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ರೋಹಿತ್ ಪಾಟೀಲ ಆಯ್ಕೆ ಯಾಗಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರ ಡಿ., ರಘೋಜಿ ಕಾರ್ಯದರ್ಶಿ ಮೀರಾ ಆರ್. ರಘೋಜಿ ಹಾಗೂ ನಂದಿನಿ ಆರ್. ರಘೋಜಿ ಹಾಗೂ ಕಾಲೇಜಿನ ಪ್ರಾಂಶುಪಾಲ ವಿನೋದಕುಮಾರ ಕಾಳೆಕರ್ ಎಲ್ಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ದೈಹಿಕ ಶಿಕ್ಷಕ ಸಂತೋಷ ಭಾವಿಮನಿ ಮತ್ತು ಕ್ರಿಕೆಟ್ ತರಬೇತಿದಾರ ಮಹೇಶ ಜಾಧವ್ ಹರ್ಷವ್ಯಕ್ತಪಡಿಸಿದ್ದಾರೆ.