ಕ್ರಿಕೆಟ್ ಟೂರ್ನಮೆಂಟ್ ಗೆ ಸಂಸದರಿಂದ ಚಾಲನೆ

ದಾವಣಗೆರೆ.ನ.೨೩ ನಗರದ ಹೈಸ್ಕೂಲ್ ಮೈದಾನದಲ್ಲಿ ಹೀರೊ ಕ್ರಿಕೆಟರ್ಸ್ ವತಿಯಿಂದ 10ನೇ ಬಾರಿಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ ರವರು ಚಾಲನೆ ನೀಡಿದರು.ಇತ್ತೀಚೆಗೆ ದೈವಾಧೀನರಾದ ಪುನೀತ್ ರಾಜ್‍ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕ್ರೀಡಾಪಟುಗಳಿಗೆ ಮತ್ತು ತಂಡಗಳಿಗೆ ಶುಭ ಕೋರಿದರು.ಈ ಸಂದರ್ಭದಲ್ಲಿ ದೂಡ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಟಿ. ಶ್ರೀನಿವಾಸ್ ದಾಸಕರಿಯಪ್ಪ, ಯುವಮೋರ್ಚಾ ಜಿಲ್ಲಾಧ್ಯಕ್ಷರು ಪಾಲಿಕೆ ಸದಸ್ಯರಾದ ಆರ್.ಎಲ್. ಶಿವಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.