ಕ್ರಿಕೆಟ್ ಕ್ರೀಡಾಕೂಟ: ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ

ವಿಜಯಪುರ, ಏ.20:ನಾಸಿಕದಲ್ಲಿ ನಡೆದ 12ನೇ (ಫೆಡರೇಶನ್ ಕಪ್) ರಾಷ್ಟ್ರೀಯ ಅಂಡರ ಆರ್ಮ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ನಾಸಿಕ್ ನಲ್ಲಿ ಏ.17ರಿಂದ 19ರವರೆಗೆ ನಡೆದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಭಾಗವಹಿಸಿ ಉತ್ತಮ ರೀತಿಯಲ್ಲಿ ಆಟವಾಡುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭದಲ್ಲಿ ಅಂಡರ್ ಅರ್ಮ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಉತ್ತಮ ಉಘಾಡೆ ಅವರು ದ್ವಿತೀಯ ಟ್ರೋಫಿ ಪ್ರದಾನ ಮಾಡಿದರು. ಈ ಕ್ರೀಡಾಕೂಟದಲ್ಲಿ ಬೆಸ್ಟ್ ಬ್ಯಾಟ್ಸಮನ್ ಎಂದು ಸತೀಶ ದೊಡಮನಿ ಹಾಗೂ ಬೆಸ್ಟ್ ಪ್ಲೇಯರ್ ಎಂದು ರಾಜಶೇಖರ ವಾಲಿಕಾರ ಆಯ್ಕೆಯಾದರು. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಂಬರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪ್ರದರ್ಶನಕ್ಕೆ ಕರ್ನಾಟಕ ತಂಡ ಅವಕಾಶ ಪಡೆದುಕೊಂಡಿದೆ ಎಂದು ತಂಡದ ತರಬೇತಿದಾರ ಬಸವರಾಜ ಬಾಗೇವಾಡಿ ತಿಳಿಸಿದ್ದಾರೆ.