ಕ್ರಿಕೆಟ್ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

ಸಿಡ್ನಿ, ನ.೧೫- ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಉಳಿದುಕೊಂಡಿರುವ ಹೋಟಲ್ ನಿಂದ ೩೦ ಕಿಲೋಮೀಟರ್ ದೂರದಲ್ಲಿ ವಿಮಾನ ಪತನವಾಗಿದೆ.

ವಿಮಾನದಲ್ಲಿ ಎಷ್ಟು ಜನರು ಇದ್ದರು ಸಾವು-ನೋವಿನ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಪಟ್ಟಿಲ್ಲ. ಆಸ್ಟ್ರೇಲಿಯಾದ ಕಾಲಮಾನ ಸಂಜೆ ೪.೩೦ ರ ಸಮಯದಲ್ಲಿ ವಿಮಾನ ಪತನವಾಗಿದೆ ಆಕಾಶದಲ್ಲಿ ಇಂಜಿನ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸಿಡ್ನಿ ಕ್ರೀಡಾ ನಲ್ಲಿ ವಿಮಾನ ಪತನವಾಗಿದೆ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರಬರಬೇಕಾಗಿದೆ.

ವಿಮಾನ ಪತನವಾದ ತುಸು ದೂರದಲ್ಲೇ ಸ್ಥಳೀಯ ಕ್ರಿಕೆಟ್ ಆಟಗಾರರು ಪುಟ್ಬಾಲ್ ಆಟಗಾರರು ತಮ್ಮ ದೈನಂದಿನ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪತನವಾದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಭ್ರಮೆಯಾಯಿತು ಎಂದು ಕ್ರೋಮರ್ ಕ್ರಿಕೆಟ್ ಕ್ಲಬ್ ನ ಹಿರಿಯ ಉಪಾಧ್ಯಕ್ಷ ಗ್ರೆಗ್ ರೊಲಿನ್ಸ್ ಹೇಳಿದ್ದಾರೆ.

ವಿಮಾನ ನೆಲಕ್ಕಪ್ಪಳಿಸಿ ಅದರಿಂದ ಹೊಗೆ ಬರುತ್ತಿದ್ದಂತೆ ಸ್ಥಳಕ್ಕೆ ಹೋಗುವ ವೇಳೆಗೆ ವಿಮಾನ ಹೊತ್ತಿ ಉರಿಯುತ್ತಿತ್ತು ಅದರಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ

ನ.೨೭ ರಿಂದ ಸರಣಿ:
ಈ ತಿಂಗಳ ೨೭ರಿಂದ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡದ ವಿರುದ್ಧ ಟೆಸ್ಟ್ ಪಂದ್ಯ ಏಕದಿನ ಪಂದ್ಯ ಟಿ೨೦ ಪಂದ್ಯಗಳನ್ನು ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಮುಗಿಸಿದ ಭಾರತೀಯ ತಂಡದ ಆಟಗಾರರು ಅಲ್ಲಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.
ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಆಟಗಾರರು ಹೋಟೆಲಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ
ನವಂಬರ್ ೨೭ರಿಂದ ಮೂರು ಏಕದಿನ ಕ್ರಿಕೆಟ್ ಪಂದ್ಯಗಳು ಮೊದಲು ಆರಂಭವಾಗಲಿದೆ ಆನಂತರ ಡಿಸೆಂಬರ್ ೨೭ರಿಂದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಪತ್ನಿಯ ಆರೈಕೆಗಾಗಿ ರಜೆ ತೆಗೆದುಕೊಂಡಿದ್ದಾರೆ ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ಮಾಡುವ ಸಾಧ್ಯತೆಗಳಿಲ್ಲ