ಕ್ರಿಕೆಟಿಗ ಶಮಿ ಪತ್ನಿ ಸುಪ್ರೀಂಗೆ ಮೊರೆ

ನವದೆಹಲಿ,ಮೇ.೩- ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ದ ವರದಕ್ಷಿಣೆ ಬೇಡಿಕೆ, ವಿವಾಹೇತರ ಸಂಬಂಧ ಹಾಗು ಅವರ ವಿರುದ್ದದ ಕ್ರಿಮಿನಲ್ ಪ್ರಕರಣಗಳಿಗೆ ಸಕಾರಣಗಳಿಲ್ಲದ ಕೆಳಹಂತದ ನ್ಯಾಯಾಲಯ ತಡೆ ಹಿಡಿದಿದೆ ಎಂದು ಪ್ರಶ್ನಿಸಿ ಮೊಹಮ್ಮದ್ ಶಮಿ ಪತ್ನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮೊಹಮ್ಮದ್ ಶಮಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಕಾರಣವಿಲ್ಲ ಕೆಳಹಂತದ ನ್ಯಾಯಾಲಯದಲ್ಲಿ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿ ಶಮಿ ಪತ್ನಿ ಹಸಿನ್ ಜಹಾನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಸಿದ್ದಾರೆ.
ಪತಿ ಹಿರಿಯ ರಾಷ್ಟ್ರೀಯ ತಂಡದೊಂದಿಗೆ ಪ್ರವಾಸದಲ್ಲಿರುವಾಗ ವೇಶ್ಯೆಯರೊಂದಿಗೆ ಹಾಗು ಇಂದಿಗೂ ವೈವಾಹಿಕ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಮಿ ವೇಶ್ಯೆಯರಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ಎರಡನೇ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂದು ದೂರಿದ್ಧಾರೆ. ಈ ಅಪರಾಧಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಲಾಲ್ ಬಜಾರ್ ಪೊಲೀಸರು ಈ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದಾಗ್ಯೂ, ಅರ್ಜಿಯಲ್ಲಿನ ಆರೋಪಗಳ ಪ್ರಕಾರ,ಶಮಿ ಇನ್ನೂ ವೇಶ್ಯೆಯರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ಅವರ ಅರ್ಜಿಯಲ್ಲಿ ಹೇಳಲಾಗಿದೆ.
ಹಸಿನ್ ಜಹಾನ್ ಅವರು ೨೦೧೮ ರಲ್ಲಿ ಶಮಿ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ವ್ಯಭಿಚಾರದ ಆರೋಪ ಮಾಡಿದ್ದರು ಮತ್ತು ಜಾದವ್‌ಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ಕ್ರಿಕೆಟಿಗ ಮತ್ತು ಅವರ ಸಹೋದರನನ್ನು ಕೋಲ್ಕತ್ತಾ ಪೊಲೀಸರ ಮಹಿಳಾ ಕುಂದುಕೊರತೆ ಕೋಶ ವಿಚಾರಣೆ ನಡೆಸಿತ್ತು. ಶಮಿ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಿತ್ತು.
ಹಸಿನ್ ಅವರ ಮ್ಯಾಚ್ ಫಿಕ್ಸಿಂಗ್ ಆರೋಪದ ನಂತರ ಬಿಸಿಸಿಐ ಶಮಿ ಅವರ ಕೇಂದ್ರ ಒಪ್ಪಂದ ತಡೆಹಿಡಿದಿದ್ದರೂ ಸಹ ನಂತರ ಆದೇಶ ತಡೆಹಿಡಿಯಲಾಯಿತು. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಮೊಹಮ್ಮದ್ ಶಮಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಹೀಗಾಗಿ ರಾಷ್ಟ್ರೀಯ ತಂಡ ಈಗ ಗುಜರಾತ್ ಟೈಟಾನ್ ಪರ ಆಡುತ್ತಿದ್ದಾರೆ,