ಕ್ರಾಂತಿ ಮೋರೆರವರಿಗೆ ಕೃಷಿ ಸೇವಾರತ್ನ ಪುರಸ್ಕಾರ

ಭಾಲ್ಕಿ:ಎ.6:ಕೃಷಿ ಕ್ಷೇತ್ರದಲ್ಲಿ ಫಲೋತ್ಪಾದನೆ ಮತ್ತು ಅಧೀಕ ಇಳುವರಿ ಬೆಳೆಗಳನ್ನು ಬೆಳೆಸಿ ರೈತರ ಸ್ವಾವಲಂಬಿ ಜೀವನಕ್ಕೆ ಆಧಾರ ಸ್ಥಂಭ ಯೋಜನೆಗಳನ್ನು ಹಮ್ಮಿಕೊಂಡಿರುವ ಭಾಲ್ಕಿ ತಾಲೂಕಿನ ಅಹಮದಾಬಾದ ಗ್ರಾಮದ ಕ್ರಾಂತಿ ರವೀಂದ್ರ ಚೌಧರಿ-ಮೋರೆ ಅವರು ಮಹಾರಾಷ್ಟ್ರದ ಅಹಮದ ನಗರದ ಪ್ರಾದೇಶಿಕ ಸಕ್ಕರೆ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮಹಾರಾಷ್ಟ್ರ ಸರ್ಕಾರ ಪದ್ಮಶ್ರೀ ಡಾ.ವಿಠಲರಾವ ವಿಖೆ ಪಾಟೀಲ್ ಕೃಷಿ ಸೇವಾರತ್ನ ಪುರಸ್ಕಾರ ನೀಡಿ ಗೌರವಿಸಿದೆ.
ವಿಶೇಷವಾಗಿ ಲಾಕ್‍ಡೌನ ಅವಧಿಯಲ್ಲಿ ಮಹಿಳೆಯರು ತಾವು ಉತ್ಪಾದಿಸಿದ ತರಕಾರಿ ಮತ್ತು ಫಲಪುಷ್ಪಗಳನ್ನು ಸ್ವತ: ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಧೀಕ ಸಂಪಾದನೆ ಹೇಗೆ ಮಾಡಿಕೊಳ್ಳಬೇಕು.ಪಶು ಸಂಗೋಪನೆ ಮತ್ತು ಮತ್ಸ್ಯ ಕೃಷಿ ಚಟುವಟಿಕೆ ಮೂಲಕ ಹೇಗೆ ಮಹಿಳೆಯರು ಕುಟುಂಬಕ್ಕೆ ಆಧಾರಸ್ಥಂಭರಾಗುತ್ತಾರೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಮಹಿಳೆಯರು ಸರ್ಕಾರದ ಯೋಜನೆಗಳನ್ನು ಹೇಗೆ ಸದುಯೋಗ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿವರ ಮಾಹಿತಿ ಕಲೆ ಹಾಕಿದ್ದಾರೆ.ಕ್ರಾಂತಿ ಮೋರೆ ಅವರ ಕೃಷಿ ಚಟುವಟಿಕೆ ಗುರುತಿಸಿ ಸರ್ಕಾರ ಕೊಡಮಾಡಲ್ಪಡುವ ಕೃಷಿ ಸೇವಾರತ್ನ ಅತ್ಯಂತ ಯೋಗ್ಯವಾಗಿದೆ ಎಂದು ಡಾ.ಶಾಮ ಮೋರೆ,ಡಾ.ಸತೀಶ ಮೋರೆ,ಮುಖಂಡರಾದ ಜನಾರ್ಧನರಾವ ಬಿರಾದಾರ,ಪ್ರದೀಪ ಬಿರಾದಾರ,ಪ್ರವೀಣ ಮೋರೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.