
* ಚಿ.ಗೋ ರಮೇಶ್
” ನನ್ನ ಎದುರು ಒಂದು ಗುಂಪಿದೆ…ನನ್ನ ಕಾಯೋಕೆ ಒಂದು ಸೈನ್ಯಾನೇ ಇದೆ …… “ಕ್ರಾಂತಿ” ಚಿತ್ರದ ಟ್ರೈಲರ್ ನ ಒಂದು ಝಲಕ್. ಎದುರಾಳಿಗಳಿಗೆ ಖಡಕ್ ಆಗಿ ಉತ್ತರ ಕೊಡ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್.
ಇತ್ತೀಚಿನ ಬೆಳವಣಿಗೆಗೆ ಈ ಸಂಭಾಷಣೆ ಪ್ರಸ್ತುತ, ಕಾಕತಾಳೀಯವೂ ಹೌದು. ಗಣರಾಜ್ಯೋತ್ಸವಕ್ಕೆ ನಾಡಿನೆಲ್ಲೆಡೆ ” ಕ್ರಾಂತಿ” ತೆರೆಗೆ ಬರಲಿದೆ. ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಕ್ಲಾಸ್ ಮತ್ತು ಮಾಸ್ ಆಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅವರ ಸೆಲೆಬ್ರಿಟೀಸ್ ಗೆ ಹಬ್ಬದೂಟ ಉಣಬಡಿಸಲು ಸಜ್ಜಾಗಿದೆ.
ನಿರ್ಮಾಪಕಿ ಶೈಲಜಾ ನಾಗ್, ತಾಯಿ ನನ್ನ ಸ್ಪೂರ್ತಿಯ ಚಿಲುಮೆಯಾಗಿದ್ದವರು. ಪತಿ ಬಿ.ಸುರೇಶ್ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿತ್ರಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ಬಂಡವಾಳ ಹಾಕಿದ್ದೇವೆ.ಹಾಗಂತ ಕಡಿಮೆ ಬಜೆಟ್ ನಲ್ಲಿ ಚಿತ್ರ ನಿರ್ಮಿಸಿಲ್ಲ.ಕಂಟೆಂಟ್ ಮುಖ್ಯ. ಅದಕ್ಕೆ ಹಣ ಹೂಡಿದ್ದೇವೆ.
ಧರಣಿ, ಬೊಂಬೆ, ಹಾಗು ಪುಷ್ಪವತಿ ಹಾಡು ಅಧಿಕ ಸಂಖ್ಯೆಯ ವೀಕ್ಷಣೆ ಪಡೆದಿದೆ. ಟ್ರೆಂಡಿಂಗ್ ನಲ್ಲಿ ಇದೆ. ಯಾವುದೇ ಬಾರಿಕೇಡ್ ಹಾಕುವುದು ಬೇಡ.ಜನರ ಮಧ್ಯೆ ಹಾಡು ಬಿಡುಗಡೆ ಮಾಡೋಣ ಎಂದು ದರ್ಶನ್ ಸಾರ್ ಹೇಳಿದ್ದರು. ಅದರಂತೆ ಮಾಡಿದ್ದೇವೆ. ಜನರ ಬೆಂಬಲ ಊಹಿಸಲೂ ಆಗದು.ಇದಕ್ಕೆಲ್ಲಾ ದರ್ಶನ್ ಕಾರಣ ಎಂದರು.
ನಿರ್ಮಾಪಕರಲ್ಲಿ ಒಬ್ಬರಾದ ಬಿ.ಸುರೇಶ್ ಅಕ್ಷರ ಲೋಕದಿಂದ ಸಿನಿಮಾ ಲೋಕಕ್ಕೆ ಬಂದಿದ್ದೇನೆ. ಒಕ್ಕೂಟ ವ್ಯವಸ್ಥೆ ನೆನಪಿಸುವ ದಿನವಾದ ಗಣರಾಜ್ಯೋತ್ಸವದಂದು ಚಿತ್ರ ಬಿಡುಗಡೆಯಾಗುತ್ತಿದೆ.30 ವರ್ಷಗಳ ಬಣ್ಣದ ಬದುಕಿನಲ್ಲಿ ಹಿಂದೆಂದೂ ಕಂಡರಿಯದ ಹೊಸ ಪ್ರಪಂಚ ಪರಿಚಯವಾಗಿದ್ದು ದರ್ಶನ್ ಅವರಿಂದ ಎಂದು ಮೆಚ್ಚುಗೆ ಮಾತನಾಡಿದರು.
ನಟಿ ನಿಮಿಕಾ ರತ್ನಾಕರ್, ಪುಷ್ಪವತಿ ಹಾಡಿನ ಮೂಲಕ ಜನಪ್ರಿಯತೆ ಹೆಚ್ಚಿಸಿದೆ.ಇದಕ್ಕೆ ಕ್ರಾಂತಿ ತಂಡ ಕಾರಣ ಎಂದರು.
ಹಿರಿಯ ಕಲಾವಿದರಾದ ನಟಿ ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು,ನಟಿಯರಾದ ಸಂಯುಕ್ತ ಹೊರನಾಡು,, ವೈನಿಧಿ ಸೇರಿ ಪಾತ್ರದ ಪರಿಚಯ ಮಾಡಿಕೊಂಡರು
ಮನಸ್ಸಿಗೆ ಇಡಿಸುವ ಚಿತ್ರ
” ಟ್ರೈಲರ್ ನಲ್ಲಿ ಇರುವುದು ಸಣ್ಣ ಝಲಕ್ ಮಾತ್ರ. ನೀಟ್ ,ಶುದ್ದ, ಚೊಕ್ಕವಾದ ಮನಸ್ಸಿಗೆ ತಟ್ಟುವ ಸಿನಿಮಾ. ಕ್ಲಾಸ್ ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ. ಸರ್ಕಾರಿ ಶಾಲೆಯ ಉಳಿವಾಗಿ ನಡೆಸುವ ಅಕ್ಷರ ಕ್ರಾಂತಿ..”
– ಚಾಲೆಂಜಿಂಗ್ ಸ್ಟಾರ್ ದರ್ಶನ್,
ನೂರು ಗುಂಡಿಗೆ ಬೇಕು
” ಕ್ರಾಂತಿ ಟ್ರೈಲರ್ ನಲ್ಲಿ ಪವರ್ ಇದೆ.ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡಲೇಬೇಕು ಅಂತ ದರ್ಶನ್ ಹೇಳಿದ್ರು. ,ಕಥೆ ಕೇಳದೆ ಚಿತ್ರದಲ್ಲಿ ನಟಿಸಿದ್ದೇನೆ. ಈಗ
ಚಿತ್ರ ನಿರ್ಮಾಣ ಮಾಡಲುನೂರು ಗುಂಡಿಗೆ ಬೇಕು. ನಿರ್ಮಾಪಕಿ ಶೈಲಜಾ ನಾಗ್ ಗೆ ಒಳ್ಳೆಯದಾಗಲಿ. ಈ ವರ್ಷ ಚಿತ್ರರಂಗಕ್ಕೆ ಬಂದು 44 ವರ್ಷದ ಚಿತ್ರ ಆಗಿದೆ…”
– ಸುಮಲತಾ ಅಂಬರೀಷ್, ಸಂಸದೆ, ನಟಿ
ಸೆಲೆಬ್ರಿಟೀಸ್ ಗೆ ಹ್ಯಾಟ್ಸ್ ಆಫ್
“ಕ್ರಾಂತಿ” ಹಾಡಿನ ಬಿಡುಗಡೆಗೆ ಮೈಸೂರು, ಹೊಸಪೇಟೆ, ಸೇರಿದಂತೆ ಮತ್ತಿತರ ಕಡೆ ಹೋದ ಸಮಯದಲ್ಲಿ ದರ್ಶನ್ ಸಾರ್ ಸೆಲೆಬ್ರೆಟೀಸ್ ನೀಡಿದ ಬೆಂಬಲ ,ಸಹಕಾರ ಅದ್ಬುತ,ಸೆಲೆಬ್ರಿಟೀಸ್ ಗೆ ಹ್ಯಾಟ್ಸ್ ಅಪ್. ಶೇಕ್ ಇಟ್ ಪದ್ಮಾವತಿ ಮೋಡಿ ಮಾಡಿದ್ದು ಚಿತ್ರ ಬಿಡುಗಡೆಗೆ ಎದುರುನೋಡುತ್ತಿದ್ದೇನೆ.
-ರಚಿತಾ ರಾಮ್, ನಟಿ
ಕ್ರಾಂತಿ ನಿಮ್ಮ ಚಿತ್ರ
” ಚಿತ್ರದ ಮಹೂರ್ತದಂದೇ ‘ಕ್ರಾಂತಿ’ ಅಭಿಮಾನಿಗಳ ಚಿತ್ರವಾಗಿ ಬಿಟ್ಟಿದೆ. ವರ್ಷದಿಂದ ಚಿತ್ರೀಕರಣ ಮಾಡಿ ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಗಣರಾಜ್ಯೋತ್ಸವಕ್ಕೆ ಬಿಡುಗಡೆ ಕ್ರಾಂತಿ ಸಂಭಾಷಣೆ ವರ್ಷದ ಹಿಂದೆ ಬರೆದಿದ್ದು ಈಗ ಪ್ರಸ್ತುತ ಅನ್ನಿಸಿದರೆ ಕಾಕತಾಳೀಯ.”
-ವಿ.ಹರಿಕೃಷ್ಣ, ನಿರ್ದೇಶಕ