ಕ್ರಾಂತಿ ಗಣೇಶ ಮೂರ್ತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ

ಬೀದರ್:ಏ.6: ನಗರದ ಶಹಾಗಂಜ್‍ನಲ್ಲಿರುವ ಪ್ರಸಿದ್ಧ ಕ್ರಾಂತಿಗಣೇಶ ಮಂದಿರದಲ್ಲಿ ಶುಕ್ರವಾರ ಪೂಜ್ಯರ ಸಾನಿಧ್ಯದಲ್ಲಿ ವಿಧ್ಯುಕ್ತವಾಗಿ ಶ್ರೀ ಗಣೇಶ, ಶಿವಲಿಂಗ, ನಾಗದೇವತಾ ಮರ್ತಿ ಪ್ರಾಣ ಪ್ರತಿಷ್ಠಾಪನಾ ಹಾಗೂ ನೂತನ ಮಂದಿರದ ಕಳಸಾರೋಣ ನಡೆಯಿತು.
ಮರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಿಮಿತ್ತ ಏ. 3 ರಿಂದಲೇ ಮಂದಿರದಲ್ಲಿ ವಿವಿಧ ಧರ್ಮಿಕ ಕರ್ಯಕ್ರಮಗಳು ನಡೆಯುತ್ತಿವೆ. ಕಳಸಯಾತ್ರೆ, ಪ್ರತಿಷ್ಠಾ ಸಂಕಲ್ಪ, ಧಾನ್ಯಾಧಿವಾಸ, ದೇವತಾ ಹವನ,ಅಗ್ನಿ ಪ್ರತಿಷ್ಠಾ, ವಾಸ್ತುಹವನ, ನವಗ್ರಹ ಹವನ, ಜಲಾಧಿವಾದ ಮುಂತಾದ ಕರ್ಯಕ್ರಮಗಳು ನಡೆದವು.
ದಿ 4 ರಂದು ಶಾಂತಿಪಾಠ, ದೇವತಾ ಆಹ್ವಾನ ಪೂಜೆ, ದೇವತಾ ಶಯ್ಯಾಧಿವಾಸ, ವಾಸ್ತು ರ್ಯಾಯ ಹವನ, ಪ್ರಸಾದನ್ಯಾಸ ನಡೆಯಿತು.
ಶುಕ್ರವಾರ ಬೆಳಗ್ಗೆ 5 ಕ್ಕೆ ಯಂತ್ರ ಮತ್ತು ಪ್ರಾಣ ಪ್ರತಿಷ್ಠಾಪನೆ ಹವನ, ಅಲಂಕಾರ ಮಹಾಪೂಜೆ ನಡೆಯಿತು. ಬೆಳಗ್ಗೆ 9.30 ಕ್ಕೆ ಪೂರ್ಣಾಹುತಿ ಮಹಾಮಂಗಳರಾತಿ ಮತ್ತಿತರ ಕಾರ್ಯಕ್ರಮಗಳು ಶ್ರೀ ನರಸಿಂಹ ವಾಸುದೇವ ದೀಕ್ಷಿತ್ ನೇತೃತ್ವದಲ್ಲಿ ನಡೆದವು.
ಮರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಹುಡಗಿ ಕಟ್ಟಿಮನಿ ಹಿರೇಮಠದ ಪೂಜ್ಯ ವಿರುಪಾಕ್ಷ ದೇವರು, ನಗರದ ಚಿದಂಬರಾಶ್ರಮದ ಪೂಜ್ಯ ಶಿವಕುಮಾರ ಮಹಾಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಮುಖರಾದ ನಂದಕಿಶೋರ ರ್ಮಾ, ಈಶ್ವರಸಿಂಗ್ ಠಾಕೂರ್, ಬಾಬುರಾವ ಕಾಮಶೆಟ್ಟಿ, ಲಕ್ಷ್ಮಣರಾವ ಬೀದರಕರ್, ಸುಭಾಷ ವಾಘಮಾರೆ, ರಾಚಪ್ಪ ಪೆÇೀಲಕಪಳ್ಳಿ, ಸಂಗಮೇಶ ಪಾಟೀಲ್ ಮಾಳಚಾಪುರ, ಧನರಾಜ ಮಡಕಿ, ಸಂಜು ಕೆಂಚಾ, ಚಂದ್ರಕಾಂತ ಜೋಪಾಟೆ, ಶಶಿ ನಾಯಕ, ಸಂತೋಷ ಭಂಗೂರೆ, ಮತ್ತಿತರ ಪ್ರಮುಖರು, ಕ್ರಾಂತಿ ಗಣೇಶ ಮಂದಿರ ಟ್ರಸ್ಟ್, ಕ್ರಾಂತಿ ಗಣೇಶ ಮಂದಿರ ಸೇವಾ ಸಮಿತಿ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.


ವರ್ಷದೊಳಗೆ ನಿರ್ಮಾಣ ಪೂರ್ಣ
ಕಳೆದ ವಿಧಾನಸಭಾ ಚುನಾವಣೆಯ ವೇಳೆ ನೀಡಿದ ಭರವಸೆಯಂತೆ ವರ್ಷದೊಳಗೆ ಪ್ರಸಿದ್ಧ ಕ್ರಾಂತಿ ಗಣೇಶ ಮಂದಿರ ನಿರ್ಮಾಣ, ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಭಕ್ತರ ಸಹಕಾರದೊಂದಿಗೆ ಪೂರ್ಣಗೊಳಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಈಶ್ವರಸಿಂಗ್ ಠಾಕೂರ್ ಹೇಳಿದರು.
ವಿಧಾನಸಭಾ ಚುನಾವಣೆ ಸಂರ್ಭದಲ್ಲಿ ಪ್ರಚಾರಕ್ಕೆ ಬಂದಾಗ, ಇಲ್ಲಿನ ಜನ ಮಂದಿರ ನರ್ಮಾಣ ಬೇಡಿಕೆ ಮುಂದಿಟ್ಟಿದ್ದರು. ವರ್ಷದೊಳಗೆ ಮಂದಿರ ನಿರ್ಮಾಣ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದೆ. ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ, ಭಕ್ತರು, ಮಂದಿರ ಟ್ರಸ್ಟ್ ಮತ್ತು ಮಂದಿರ ಸೇವಾಸಮಿತಿ ಸಹಯೋಗದೊಂದಿಗೆ ಮಂದಿರ ನಿÀರ್ಮಾಣ ಪೂರ್ಣಗೊಳಿಸಲಾಗಿದೆ. ಮರ್ತಿ ಪ್ರಾಣಪ್ರತಿಷ್ಠಾಪನೆಯೂ ವಿಧ್ಯುಕ್ತವಾಗಿ ನಡೆದಿದೆ ಎಂದು ತಿಳಿಸಿದರು.
ಶುಕ್ರವಾರ ಮಂದಿರದಲ್ಲಿ ನಡೆದ ಎಲ್ಲ ಧಾರ್ಮಿಕ ಕರ್ಯಕ್ರಮಗಳಲ್ಲಿ ಈಶ್ವರಸಿಂಗ್ ಠಾಕೂರ್ ಪಾಲ್ಗೊಂಡಿದ್ದರು.