ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಲೋಕಾರ್ಪಣೆ

ಸೇಡಂ,ಮಾ,27: ಪಟ್ಟಣದ ಕಲಬುರ್ಗಿ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನ ಸ್ಥಾಪಿಸಲಾಗಿರುವ ಸ್ಥಳದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ತಳಿಯನ್ನು ಬೀದರ್ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಸಚಿವರಾದ ಶ್ರೀ ಭಗವಂತ ಖೂಬಾ ಅವರು ಲೋಕಾರ್ಪಣೆಗೊಳಿಸಿದರು. ನಂತರ ರಾಯಣ್ಣರ ಉದ್ಯಾನವನವು ಉದ್ಘಾಟಿಸಿದ ಅವರು ಬೃಹತ್ ಸಭೆಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವೇಳೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ,ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಸಿದ್ದರಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಪಂಚಾಕ್ಷರ ಸ್ವಾಮೀಜಿಗಳು, ಪೂಜ್ಯಶ್ರೀ ಲಿಂಗಪ್ಪ ತಾತನವರು, ಪೂಜಶ್ರೀ ಮರಿಯಪ್ಪ ತಾತ, ರಾಯಣ್ಣ ಸಮಿತಿಯ ಅಧ್ಯಕ್ಷ ಮಂಜುನಾಥ್ ಎನ್ ಪೂಜಾರಿ ಕಾಚೂರ, ಶಿವಕುಮಾರ್ ಪಾಟೀಲ್ ತೇಲ್ಕೂರ್, ಮುಕುಂದ ದೇಶಪಾಂಡೆ, ಪರ್ವತ್ ರೆಡ್ಡಿ, ವೀರೇಶ್ ಹೂಗಾರ್, ಪುರಸಭೆ ಉಪಾಧ್ಯಕ್ಷ ಚಂದ್ರಶೇಖರ್ ಕೆರಳಿ,ಮಾಳಪ್ಪ ಪೂಜಾರಿ ತೊಟ್ನಳ್ಳಿ, ಶರಣು ಮೆಡಿಕಲ್, ಶೇಖರ್ ನಾಟಿಕರ, ನಾಗೇಂದ್ರಪ್ಪ ಹೆಡ್ಡಳ್ಳಿ ಕರ್, ಮಹಾದೇವ ಲೀಡರ್, ಯಲ್ಲಾಲಿಂಗ ಎಸ್ ಪೂಜಾರಿ, ನಾಗರಾಜ್ ಪೂಜಾರಿ, ಶ್ರೀಮತಿ ಶ್ರೀದೇವಿ ಶಿವಪ್ಪ ಬೆಟಿಗೇರ ವೇದಿಕೆ ಮೇಲೆ ಇದ್ದರು, ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯ ಸಮಿತಿಯ ಸದಸ್ಯರಾದ ಭೀಮರಾವ್, ಮಲ್ಲಪ್ಪ ಪೂಜಾರಿ, ದೇವೇಂದ್ರಪ್ಪ ಸಿದ್ದು ಚಂದ್ರಶೇಖರ್ ಮಲ್ಲಿಕಾರ್ಜುನ್ ರೇವಣಸಿದ್ದಪ್ಪ ಬಸವರಾಜ್ ಅಯ್ಯಪ್ಪ ಶಂಕರ್ ಲಿಂಗ ಸಾಬಣ್ಣ ಶರಣು ಸಹದೇವ್ ಶರಣು ಪೂಜಾರಿ ತೊಟ್ನಳ್ಳಿ ನರಸಪ್ಪ ಪೂಜಾರಿ ಯಡ್ಡಳ್ಳಿ, ಸಂತೋಷ್ ಬೀರಪ್ಪ ಈಶ್ವರಲಿಂಗ ರಾಘವೇಂದ್ರ ಅಂಬರೀಶ್ ಗುಂಡಪ್ಪ ಪೂಜಾರಿ ಮಲ್ಲಿಕಾರ್ಜುನ್ ಮಾಳಿಂಗರಾಯ ಪೂಜಾರಿ ಉಪಸ್ಥಿತರಿದ್ದರು. ನಿರೂಪಣೆ ವಸಂತ್ ಕುಮಾರ್ ಪೂಜಾರಿ, ಸ್ವಾಗತ ಸತೀಶ್ ಎನ್ ಪೂಜಾರಿ ಮಾಡಿದರು.

ಸೇಡಂ ನಗರಕ್ಕೆ ಬರುವಾಗ ರಾಜ್ಯ ಹೆದ್ದಾರಿಗೆ ತೆರಳುವ ಸಾವಿರಾರು ವಾಹನಗಳ ಜನರಿಗೆ ಸ್ವಾತಂತ್ರ ಹೋರಾಟಗಾರನ ಪುತ್ತಳಿ ವೀಕ್ಷಿಸುವ ಮೂಲಕ ಪ್ರತಿಯೊಬ್ಬರಲ್ಲಿ ದೇಶಭಕ್ತಿ ಹೆಚ್ಚಿಸುವಂತೆ ಮಾಡಿದ ಸ್ಥಳೀಯ ಶಾಸಕ ರಾಜಕುಮಾರ್ ಪಾಟೀಲ್ ಗೆ ಸಲ್ಲುತ್ತದೆ ಅದರ ಜೊತೆಗೆ 20 ವರ್ಷಗಳ ಅಭಿವೃದ್ಧಿಯು 5 ವರ್ಷದಲ್ಲಿ ಮಾಡಿದ ಕೀರ್ತಿ ಶಾಸಕ ತೇಲ್ಕೂರಗೆ.

ಭಗವಂತ ಖೂಬಾ ಬೀದರ್ ಲೋಕಸಭಾ ಸದಸ್ಯರು ಕೇಂದ್ರ ಸಚಿವರು ಕೇಂದ್ರ ಸರ್ಕಾರ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇಷ ಧರಿಸಿದ ಸಮಾಜ ಸೇವಕ ಪ್ರಜಾ ಕಾರ್ಮಿಕ ಶೇಖರ್ ನಾಟಿಕರ ಮಿಂಚಿದರು.

ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯ ಸಮಿತಿಯವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಅವರಿಗೆ ಸನ್ಮಾನಿಸಿದ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಸ್ವಾತಂತ್ರ ಹೋರಾಟಗಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ತಳಿಯನ್ನು ಸೇಡಂ ಪಟ್ಟಣದಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಸರ್ ಅವರಿಗೂ ಹಾಗೂ ಪುರಸಭೆಯ ಅಧ್ಯಕ್ಷರಿಗೂ ಅಧಿಕಾರಿಗಳಿಗೂ ರಾಯಣ್ಣನ ಸಮಿತಿಯು ಹಾಗೂ ಸಮಸ್ತ ಹಾಲುಮತ ಸಮಾಜದ ಬಾಂಧವರು ಅಭಿನಂದನೆ ಕೃತಜ್ಞತೆಗಳು ಸಲ್ಲಿಸುತ್ತೇವೆ.

ಮಂಜುನಾಥ್ ಎನ್ ಪೂಜಾರಿ ಕಾಚೂರ

ಅಧ್ಯಕ್ಷರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಸೇಡಂ