ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣಕ್ಕೆ ಕ್ಷಣಗಣನೆ

ಸೇಡಂ,ಮಾ,26: ಪಟ್ಟಣದಲ್ಲಿಂದು ಸ್ವಾತಂತ್ರ ಹೋರಾಟಗಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದ್ದು ರಾಯಣ್ಣ ಉದ್ಯಾನವನದಲ್ಲಿ ಸುತ್ತಮುತ್ತ ಗೋಡೆಗಳ ಮೇಲೆ ರಾಯಣ್ಣರ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಗಳು ಹಾಗೂ ಕನ್ನಡಾಂಬೆಯ ಧ್ವಜದ, ಜೊತೆಗೆ ಶ್ರೀ ಕೊತ್ತಲ ಬಸವೇಶ್ವರರ ಚಿತ್ರಗಳು ಕಂಗೊಳಿಸುತ್ತಿವೆ,
ಸಮಿತಿಯವರು ರಾಯಣ್ಣರ ಮೂರ್ತಿ ಅನಾವರಣಕ್ಕೆ ಸಕಲ ಸಿದ್ಧತ ಮಾಡಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಿದ್ದಾರೆ.