ಕ್ರಷರ್ ಘಟಕಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ಏ.4-ಜಿಲ್ಲೆಯ ಐನಾಪೂರ ಗ್ರಾಮದಲ್ಲಿರುವ ಕ್ರಷರ್ ಘಟಕಗಳಿಗೆ ಫಾರಂ-ಬಿ, ಫಾರಂ-ಸಿ ಹಾಗೂ ಫಾರಂ-ಸಿ ನವೀಕರಣ, ಪರಿಭಾವಿತ ವಿಸ್ತರಣೆ ನೀಡುವ ಸಂಬಂಧ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದರಂತೆ ಇದೇ ಸಂದರ್ಭದಲ್ಲಿ ಜಿಲ್ಲಾ ಕಲ್ಲು ಪುಡಿ ಮಾಡುವ ಪ್ರಾಧಿಕಾರದ ಅಧ್ಯಕ್ಷರನ್ನೊಳಗೊಂಡಂತೆ ಸದಸ್ಯರಾದ ಉಪವಿಭಾಗಾಧಿಕಾರಿಗಳು, ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪರಿಸರ ಇಲಾಖೆ ಅಧಿಕಾರಿಗಳು, ಪೊಲೀಸ್ ಉಪ ಅಧೀಕ್ಷಕರು ಈ ಸ್ಥಳದ ಬಗ್ಗೆ ಮಾಹಿತಿ ನೀಡಲು ವಿಜಯಪುರ ನಗರಾಭಿವೃದ್ಧಿ ಆಯುಕ್ತರು ಐನಾಪೂರ ಗ್ರಾಮದಲ್ಲಿ ಕ್ರಷರ್ ವಲಯಗಳಿರುವ ಪ್ರದೇಶಕ್ಕೆ ಭೇಟಿ ನೀಡಿ ಚರ್ಚಿಸಿ ಮುಂದಿನ ಟಾಸ್ಕ್‍ಪೋರ್ಸ್ ಸಭೆಯಲ್ಲಿ ಮಂಡಿಸಿ ಈ ವಿಷಯಗಳ ಬಗ್ಗೆ ವಿಜಯಪುರ ನಗರಾಭಿವೃದ್ಧಿ ಆಯುಕ್ತರು ಕ್ರಮಕೈಗೊಳ್ಳಲು ಸೂಚಿಸಲು ತೀರ್ಮಾನಿಸಲಾಯಿತು.