ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿ ವಿಫಲ, ಕ್ರಮಕ್ಕೆ ಆಗ್ರಹ

ರಾಯಚೂರು, ಜ.೨೯-ಟೆಕ್ಸಕಾನ್ ಸ್ಟೀಲ್ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಟೆಕ್ಸಕಾನ್ ಸ್ಟೀಲ್ ಕಾರ್ಖಾನೆಯು ಸುಮಾರು ತಿಂಗಳುನಿಂದ ಕಾರ್ಯನಿರ್ವಹಿಸುತ್ತಿದ್ದು ಸದರಿ ಕಾರ್ಖಾನೆಯ ಕಿಲ್ಲನ್ ಗಳು ಹಳೆಯ ಸುರಾನ ಸ್ಟೀಲ್ ಕಾರ್ಖಾನದ್ದಾಗಿದ್ದು ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ಆರೋಪಿಸಿದರು.
ಈ ಕಾರ್ಖಾನೆಯಲ್ಲಿ ಯಾವುದೇ ರೀತಿಯ ಸೇಫ್ಟಿಗೆ ಸಂಬಂಧಿಸಿದಂತೆ ಮುಂಜಾಗ್ರತ ವಹಿಸಿಕೊಳ್ಳಲು ನುರಿತ ಸೇಫ್ಟಿ ಅಧಿಕಾರಿಗಳು ಇರುವುದಿಲ್ಲ.
ಈ ಹಿಂದೆ ಇದ್ದ ಹಳೆಯ ಕಾರ್ಖಾನೆಯಿಂದಲೇ ಪ್ರೊಡಕ್ಷನ್ ನಡೆಸಿರುವುದರಿಂದ ಕಬ್ಬಿಣ ಮಿಶ್ರಿತ ಕಲ್ಮಶ ಧೂಳು ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರ ಶಾಶ್ವಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ಅಸ್ತಮಾ ಅಲರ್ಜಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಮಾರಕ ರೋಗಗಳಿಂದ ಸಾರ್ವಜನಿಕರು ತೀವ್ರ ಬಾಧಿತರಾಗಿದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ ಹಾಗೂ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಗಿಡಗಂಟೆಗಳನ್ನು ನೆಲಸಮ ಮಾಡಿರುತ್ತಾರೆ ಇಷ್ಟೆಲ್ಲ ಜ್ವಲಂತ ಸಮಸ್ಯೆಗಳು ಕಾಡುತ್ತಿದ್ದರು ಸಹ ಇದಕ್ಕೆ ಸಂಬಂಧಿಸಿದ ಕಾರ್ಖಾನೆಯ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುತ್ತದೆ ಎಂದು ಆರೋಪಿಸಿದರು.
ಅನೇಕ ಭಾರೀ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಹೈದರಾಬಾದ್ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾಬುರಾವ,ಕೃಷ್ಣ ಮಾಚರ್ಲಾ, ನರಸಿಂಹಲು,ಹುಸೇನಪ್ಪ, ಮಾರುತಿ ಸೇರಿದಂತೆ ಉಪಸ್ಥಿತರಿದ್ದರು.