ಕ್ರಮಕ್ಕೆ ಮುಂದಾಗದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಈಚನಾಳ ಪಿಡಿಒ!
ದುರಗಪ್ಪ ಹೊಸಮನಿ
ಲಿಂಗಸುಗೂರು ೧೬-ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮ ಪಂಚಾಯತ್ ಪಿಡಿಓ ದಲಿತ ಕಾಲೊನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಈ ಪಂಚಾಯತ್ ಪಿಡಿಓ ವಿರುದ್ಧ ಸಂಜೆ ವಾಣಿ ಪತ್ರಿಕೆಯಲ್ಲಿ ಹಲವಾರು ಬಾರಿ ಮೂಲಭೂತ ಸೌಕರ್ಯ ಕಲ್ಪಿಸಲು ಅಸಡ್ಡೆ ತೋರುತ್ತಿದ್ದಾರೆ ಇದರಿಂದಾಗಿ ದಲಿತರ ಕಾಲೋನಿ ಸಮಸ್ಯೆಗಳ ತಾಣವಾಗಿದೆ ಇಂತಹ ಪಿಡಿಓ ಇರುವುದರಿಂದ ಬಡಜನರ ಹೊಟ್ಟೆಮೇಲೆ ಬರೆ ಎಳೆಯುವ ಮೂಲಕ ಆಡಳಿತ ನಡೆಸುವ ಮುಖಾಂತರ ಅಟ್ಟಹಾಸ ಮೆರೆಯುತ್ತಿದ್ದಾರೆ ದಲಿತ ಕಾಲೋನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಣ್ಣು ಮುಚ್ಚಿ ಕುಳಿತ ತಾಪಂ ಸಿಇಓ?
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಅನೇಕ ಸಲ ಈಚನಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಏಕೆಂದರೆ ಈ ಪಿಡಿಓ ರವರಿಗೆ ರಾಜಕೀಯ ಮಾಡುವ ರಾಜಕಾರಣಿಗಳ ಬೆಂಬಲ ವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ ಇದರಿಂದ ಮಹಿಳಾ ಪಿಡಿಓ ಊರಿನ ನಾಗರಿಕರ ಜೋತೆ ಚೆಲ್ಲಾಟ ವಾಡುತಿದ್ಧಾರೆ ಎಂಬುದು ಆರೋಪಿಸಿದ್ದಾರೆ.
ಇಷ್ಟೇಲ್ಲಾ ಈಚನಾಳ ಗ್ರಾಮದಲ್ಲಿ ಸಮಸ್ಯೆಗಳು ಇದ್ದರು ಕೂಡ ಪಿಡಿಓ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ.
ನಾಗರಿಕರ ಜೋತೆ ಪಿಡಿಓ ಚೆಲ್ಲಾಟ!!
ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಗಳು ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಗ್ರಾಮಗಳಿಗೆ ಯೋಜನೆ ಹಳ್ಳ ಹಿಡಿದಿದೆ ನರೇಗಾ ಯೋಜನೆ ಹೆಸರಿನಲ್ಲಿ ಹಾಗೂ ೧೫ನೇ ಹಣಕಾಸು ಯೋಜನೆ ಎಸ್ ಸಿ ಎಸ್ ಟಿ ಯೋಜನೆ ಇನ್ನೂ ಹಲವಾರು ಯೋಜನೆಗಳಿಗೆ ಬಂದ ಅನುದಾನ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಮಾಹಿತಿ ಪತ್ರಿಕೆಗೆ ಲಭಿಸಿದೆ ಇದರಲ್ಲಿ
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೈಚಳಕ ಎದ್ದು ಕಾಣುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ. ಆದರೆ ಸರ್ಕಾರ ಗ್ರಾಮ ಪಂಚಾಯತ್‌ಗೇ ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಕೋಟಿ ಕೋಟಿ ಹಣ ಮೀಸಲಿಟ್ಟರು, ಗ್ರಾಮಿಣ ಭಾಗದ ಜನರ ಸಮಸ್ಯೆಗಳಿಗೇ ಗ್ರಾಮ ಪಂಚಾಯತ್ ಅಧಿಕಾರಿಗಳ ಬೆಜವಬ್ದಾರಿತನ ದಿಂದ ಸರಿಯಾಗಿ ಸರ್ಕಾರದ ಸೌಕರ್ಯಗಳು ತಲುಪಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಈಚನಾಳ ಗ್ರಾಮ ಪಂಚಾಯತ್ ಈ ಗ್ರಾಮದಲ್ಲಿ ೧ನೇ ವಾರ್ಡ್‌ನಲ್ಲಿ ಚರಂಡಿ ತುಂಬಿ, ಗಲೀಜು ನೀರು ರಸ್ತೆಯ ಮೇಲೆ ಹರಿಯುವ ಕುರಿತು ಈಗಾಗಲೆ ಹಲವು ದಿನಪತ್ರಿಕೆಗಳಲ್ಲಿ ಮೂರು ತಿಂಗಳುಗಳ ಹಿಂದೆ ವರದಿ ಬಂದಿವೆ.
ಈ ಪತ್ರಿಕಾ ವರದಿಗಳನ್ನು ಆಧರಿಸಿ ದಿ.೨೪.ರಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀ ದೇವಿ ಅವರು ಈಚನಾಳ ಗ್ರಾಮ ಕ್ಕೆ ಭೇಟಿ ನೀಡಿ, ಅಸ್ವಚ್ಛತೆಯ ಸ್ಥಳ ಪರಿಶೀಲನೆ ಮಾಡಿ, ೨ ತಿಂಗಳು ೧೫ ದಿನ ಕಳೆದರೂ, ಈ ಚರಂಡಿ ಯ , ಸಮಸ್ಯೆ ಬಗೆಹರಿಸಲು ಆಗದೇ ಇರುವುದು ನಿಜಕ್ಕೂ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆ ಗಳ ಬಗ್ಗೆ ಎಷ್ಟೋಂದು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಈ ಘಟನೆಯೇ ಸಾಕ್ಷಿ. ಒಟ್ಟಾರೆ ಈಚನಾಳ ಗ್ರಾಮ ದ ಈ ಅಸ್ವಚ್ಛತೆಯ ಸ್ಥಳಗಳಿಗೇ ಹಲವು ತಿಂಗಳುಗಳಿಂದ ಪರಿಹಾರ ಸಿಗದೇ ಇರುವುದು, ದಪ್ಪ ಚರ್ಮದ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ಕೂಗು ತಲುಪುತ್ತಿಲ್ಲವೇ? ಎಂದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.