ಕ್ರಮಕ್ಕೆ ಕಾಂಗ್ರೆಸ್ ಮನವಿ

ಧಾರವಾಡ ಜೂ.10-ಉತ್ತರಕರ್ನಾಟಕದ ಹೆಮ್ಮೆಯ, ಬಡವರ ಜೀವರಕ್ಷಕ ಕಿಮ್ಸ್‍ನಲ್ಲಿ ಕೆಲ ವೈದ್ಯರ ಭ್ರಷ್ಟಾಚಾರ, ಕರ್ತವ್ಯ ನಿರ್ವಹಣೆ ಲೋಪದಿಂದಾಗಿ ಬಡರೋಗಿಗಳಿಗೆ, ರೈತರಿಗೆ, ಹಿಂದುಳಿದವರಿಗೆ, ಸ್ತ್ರೀಯರಿಗೆ, ಕೂಲಿಕಾರರಿಗೆ ಅನ್ಯಾಯವಾಗುತ್ತಿದ್ದು ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ವಕ್ತಾರ ರಾಬರ್ಟ ದದ್ದಾಪುರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉತ್ತರಕರ್ನಾಟಕ ಮತ್ತು ಪ್ರದೇಶಗಳ ನೋಡಲ್ ಕೇಂದ್ರವಾಗಿ ಅಭಿವೃದ್ಧಿಸಲಾಗುತ್ತಿದ್ದು ಇಂತಹ ಪ್ರತಿಷ್ಠಿತ ಕಿಮ್ಸ್‍ನಲ್ಲಿಂದು ಕೆಲವು ವೈದ್ಯರ ಕರ್ತವ್ಯ ಚ್ಯುತಿಯಿಂದಾಗಿ ಸಮಸ್ತ ಕಿಮ್ಸ್‍ಗೆ ಕೆಟ್ಟ ಹೆಸರು ಬಂದಿದೆ. ಇತ್ತೀಚೆಗೆ ಮಾಧ್ಯಮಗಳಲ್ಲೂ ವರದಿಯಾಗಿದೆ. ವೈದ್ಯರ ಲೋಪಕ್ಕೆ, ಉತ್ತರ ಕರ್ನಾಟಕದ ಕಿಮ್ಸ್‍ಗೆ ಕಳಂಕ ಬಂದಿದೆ. ಸರಕಾರವು ಈ ಕುರಿತು ಸಮಗ್ರ ತನಿಖೆಯನ್ನು ಮಾಡಬೇಕು. ಈಗಾಗಲೇ ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅವರು 11 ವೈದ್ಯರಿಗೆ ನೋಟೀಸು ಜಾರಿಗೆ ಮಾಡಿದ್ದು, ಸ್ವಾಗತಾರ್ಹವೆಂದು ಕಾಂಗ್ರೆಸ್ ವಕ್ತಾರ ರಾಬರ್ಟ ದದ್ದಾಪೂರಿ ತಿಳಿಸಿದ್ದಾರೆ.
ಈ ಕೂಡಲೇ ತನಿಖೆಯನ್ನು ರಾಜ್ಯ ಸರಕಾರ ನ್ಯಾಯಾಧೀಶರಿಂದ ಮಾಡಿಸಬೇಕು. ಅಲ್ಲದೆ ಕರ್ತವ್ಯ ಲೋಪ ಮಾಡಿರುವ ವೈದ್ಯರನ್ನು ಈ ಕೂಡಲೇ ಕೆಲಸದಿಂದ ತೆಗೆದು ಹಾಕಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆನಂದ ಜಾದವ, ಕೆಪಿಸಿಸಿ ಸದಸ್ಯ ಪ್ರಕಾಶ ಘಾಟಗೆ ಅನಂದ ಮುಶೆಣ್ಣವರ ಉಪಸ್ಥಿತರಿದ್ದರು.