ಕ್ಯೂಮ್ಯಾತ್ ಸೇರಿದ ವಿದ್ಯಾಬಾಲನ್

ಬೆಂಗಳೂರು,ನ.೧೫- ಗಣಿತ ಕಲಿಕಾ ಎಡ್ ಟೆಕ್ ವೇದಿಕೆಯಾಗಿರುವ ಕ್ಯೂಮ್ಯಾತ್ ನ ನೂತನ ರಾಯಭಾರಿಯಾಗಿ ಬಾಲಿವುಡ್ ನ ಖ್ಯಾತ ನಟಿ ವಿದ್ಯಾಬಾಲನ್ ಅವರನ್ನು ನೇಮಕ ಮಾಡಿಕೊಂಡಿದೆ.
ಅತ್ಯಂತ ಪ್ರತಿಭಾಶಾಲಿ ಗಣಿತ ತಜ್ಞೆಯಾಗಿದ್ದ ಶಕುಂತಲಾ ದೇವಿ ಅವರ ಕುರಿತಾದ ಚಿತ್ರದಲ್ಲಿ ಶಕುಂತಲಾ ದೇವಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿರುವ ವಿದ್ಯಾಬಾಲನ್ ಕ್ಯೂಮ್ಯಾತ್ ನ ಗಣಿತ ಕಲಿಕೆಯ ಹೊಸ ಜಾಹೀರಾತು ಅಭಿಯಾನದಲ್ಲಿ ಆಕರ್ಷಕ ರೀತಿಯಲ್ಲಿ ಕಲಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ದೂರದೃಷ್ಠಿಯುಳ್ಳ ಶಿಕ್ಷಕರಾದ ಮನನ್ ಖುರ್ಮಾ ಅವರು ೨೦೧೩ ರಲ್ಲಿ ಆರಂಭಿಸಿರುವ ಕ್ಯೂಮ್ಯಾತ್ ಎಡ್-ಟೆಕ್ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ೪೦ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕ್ಯೂಮ್ಯಾತ್ ಮೂಲಕ ಶಿಕ್ಷಣ ಪಡೆದಿದ್ದಾರೆ.
ಕ್ಯೂಮ್ಯಾತ್ ನ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಿದ್ಯಾಬಾಲನ್ ಅವರು, ನಾನು ನನ್ನ ಹಿಂದಿನ ಚಿತ್ರದ ಸಂಶೋಧನೆ ಸಲುವಾಗಿ ಕ್ಯೂಮ್ಯಾತ್ ನ ಮಾದರಿ ತರಗತಿಗೆ ಹಾಜರಾಗಿದ್ದೇನೆ ಎಂದಿದ್ದಾರೆ.