ಕ್ಯೂಪಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಕಲಬುರಗಿ,ಮೇ 1: ತಲೆಗೆ ತೀವ್ರ ಗಾಯವಾಗಿ,ಭಾರಿ ಪ್ರಮಾಣದ ರಕ್ತ ಹರಿದುಹೋಗಿ ಕೋಮಾದಲ್ಲಿದ್ದ 30 ವರ್ಷ ವಯಸ್ಸಿನ ಯುವಕನಿಗೆ ಕ್ಯೂಪಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಸಿಟಿಸ್ಕ್ಯಾನ್‍ನೊಂದಿಗೆ ತುರ್ತು ಚಿಕಿತ್ಸೆ, ರಕ್ತ ಪೂರೈಕೆಯೊಂದಿಗೆ ತುರ್ತು ಕಾರ್ಯಾಚರಣೆ ಮತ್ತು ಸರಿಯಾದ ಐಸಿಯು ಆರೈಕೆಯು ಅತ್ಯುತ್ತಮ ಫಲಿತಾಂಶವನ್ನು ನೀಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ಯೂಪಿ ಆಸ್ಪತ್ರೆಯು ನಿರಂತರ (24/7 ) ಮತ್ತು ನಿರ್ಣಾಯಕ ಪ್ರಕರಣಗಳಿಗೆ ಸಿದ್ಧವಾಗಿದೆ. ಎಲ್ಲ ತುರ್ತು ಸಂದರ್ಭಗಳಲ್ಲಿ ಉಚಿತ ಸಿಟಿ ಸ್ಕ್ಯಾನ್ ಕೈಗೊಳ್ಳಲಾಗುವದು ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರು ಘೋಷಿಸಿದ್ದಾರೆ.