ಕ್ಯಾರೆಟ್ ಪನೀರ್ ಖೀರು

ಬೇಕಾಗುವ ಸಾಮಗ್ರಿಗಳು:

  • ಹಾಲು – ೧೦೦ ಮಿ.ಲೀ.
  • ಕ್ಯಾರೆಟ್ – ೨
  • ಗೋಡಂಬಿ – ೧೦ ಪೀಸ್
  • ಒಣದ್ರಾಕ್ಷಿ – ೧೦ ಪೀಸ್
  • ಪನೀರ್ ತುರಿ – ೧೦೦ ಗ್ರಾಂ
  • ಏಲಕ್ಕಿ ಪುಡಿ – ೧/೨ ಚಮಚ
  • ತುಪ್ಪ – ೧ ಚಮಚ
  • ನೀರು – ೧/೨ ಲೀಟರ್
  • ಕಂಡೆನ್ಸ್ಡ್ ಮಿಲ್ಕ್ – ೫೦ ಗ್ರಾಂ

ಮಾಡುವ ವಿಧಾನ:
ಬಾಣಲಿಗೆ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಕುಕ್ಕರ್‌ಗೆ ನೀರು, ಕ್ಯಾರೆಟ್‌ತುರಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ತಣ್ಣಗಾದ ನಂತರ ಬೇಯಿಸಿದ ಕ್ಯಾರೆಟ್‌ಗೆ ಸ್ವಲ್ಪ ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ ಹಾಲು, ರುಬ್ಬಿಕೊಂಡ ಕ್ಯಾರೆಟ್ ಮಿಶ್ರಣ, ಪನೀರ್ ತುರಿ, ಕಂಡೆನ್ಸ್ಡ್ ಮಿಲ್ಕ್ ಹಾಕಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿದರೆ ಸಿಹಿಸಿಹಿ ಕ್ಯಾರೆಟ್ ಪನೀರ್ ಖೀರು ಸವಿಯಲು ರೆಡಿ.