ಕ್ಯಾರಾವ್ಯಾನ್ ಮಂಜುಗೆ ಒಲಿದ ಅದೃಷ್ಠ

ಅದೃಷ್ಠ ಅಂದರೆ ಹಾಗೆ. ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಕ್ಯಾರವಾನ್‍ನಲ್ಲಿ ಅನೇಕ ಸ್ಟಾರ್‍ಗಳಿಗೆ ವಾಹನ ಓಡಿಸುತ್ತಿದ್ದ ಸ್ಮೈಲ್ ಮಂಜುಗೆ ಈಗ ಅದೃಷ್ಠ ಖುಲಾಯಿಸಿದೆ. ಅರ್ಥಾತ್ ಇದುವರೆಗೆ ನಾಯಕರಿಗೆ ಕಾರವಾನ್ ಓಡಿಸುತ್ತಿದ್ದ ಮಂಜು ಇದೀಗ “ ಲಕ್ “ ಚಿತ್ರದ ಮೂಲಕ ನಾಯಕನಾಗಿದ್ದಾರೆ. ಚಿತ್ರದ “90 ಕುಡಿ ಮಗ ಪಲ್ಟಿ ಹೊಡಿ” ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು.

ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಸ್ಮೈಲ್ ಮಂಜು ಅವರಿಗೆ  ಚಿತ್ರದ ಮೂಲಕ ಕ್ಯಾರವಾನ್ ಸ್ಟಾರ್ ಎನ್ನುವ ಬಿರುದು ನೀಡಲಾಗಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂದ ಮಂಜು, ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡುಸುತ್ತಿದ್ದೇನೆ. ನಟರಾದ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಚಾಲಕ ನಾಯಕನಾಗಿದ್ದೇನೆ, ನಾನೇ ನಿರ್ಮಾಪಕ. ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ ಎಂದರು.

ಚಿತ್ರದ ಹಾಡು ಬಾಕಿ ಇದೆ. ಅದನ್ನು ನಂದಿನಿ ಲೇಔಟ್ ಸೇರಿದಂತೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ. ಚುನಾವಣೆ ಸಮಯ ಆಗಿರುವ ಹಿನ್ನೆಲೆಯಲ್ಲಿ ಹೊರಾಂಗಣದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡುತ್ತಿಲ್ಲ. ಹೀಗಾಗಿ  ಚುನಾವಣೆ ಮುಗಿದ ಬಳಿಕ ಚಿತ್ರೀಕರಣ ಮಾಡುವ ಉದ್ದೇಶವಿದೆ.

ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ನಾಯಕಿಯ ಪಾತ್ರ ಒಂದು ರೀತಿ ಯಾರೇ ನೀನು ಚೆಲುವೆ ಚಿತ್ರದಲ್ಲಿ ಬರುವ ಪಾತ್ರದಂತಿದೆ. ಕ್ಲೈಮಾಕ್ಸ್‍ನಲ್ಲಿ ನಾಯಕಿ ಭೇಟಿ ಆಗುವ ಸನ್ನಿವೇಶ ಇದೆ. ಹೀಗಾಗಿ ನಾಯಕಿ ಭಾಗದ ಚಿತ್ರೀಕರಣ ಭಾಕಿ ಉಳಿಸಿಕೊಂಡಿದ್ದೇವೆ ಎಂದರು.

ನಿರ್ದೇಶಕ ಹರೀಶ್ ಪದ್ಮಜಾರಾವ್, ಕಡ್ಡಿಪುಡಿ ಚಂದ್ರು, ರೇಣು ºಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದರು. ವಿಜಯ್ ಹರಿತ್ಸ  ಸಂಗೀತ ಚಿತ್ರಕ್ಕಿದೆ.