ಕ್ಯಾಪ್ಸಿಕಮ್ ಚಾಟ್

ಬೇಕಾಗುವ ಪದಾರ್ಥಗಳು:
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಅಚ್ಚಖಾರದಪುಡಿ, ಗಾಲಿಯಾಕಾರದಲ್ಲಿ ಹೆಚ್ಚಿದ ಕ್ಯಾಪ್ಸಿಕಮ್, ಟೊಮೊಟೊ, ಈರುಳ್ಳಿ, ತುರಿದ ಕ್ಯಾರೆಟ್, ಕೊತ್ತಂಬರಿಸೊಪ್ಪು, ಹುಣಸೆರಸ, ಸೇವ್, ಇವುಗಳು ರುಚಿಗೆ ತಕ್ಕಷ್ಟು.
ವಿಧಾನ: ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಅಚ್ಚಖಾರದಪುಡಿ ತಕ್ಕಷ್ಟು ನೀರುಹಾಕಿ ಕಲೆಸಿ. ಈ ಹಿಟ್ಟಿನಲ್ಲಿ ಗಾಲಿಯಾಕಾರದಲ್ಲಿ ಹೆಚ್ಚಿದ ಕ್ಯಾಪ್ಸಿಕಮ್ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಇದರ ಮೇಲೆ ಹೆಚ್ಚಿದ ಟೊಮೊಟೊ ಮತ್ತು ಈರುಳ್ಳಿ ಹಾಕಿ ತುರಿದ ಕ್ಯಾರೆಟ್, ಕೊತ್ತಂಬರಿಸೊಪ್ಪು, ಚಿಟಿಕೆ ಉಪ್ಪು, ಹುಣಿಸೆರಸ ಹಾಕಿ ಸೇವ್ ಉದುರಿಸಬೇಕು.