ಕ್ಯಾಪ್ಸಿಕಂ ಮೊಸರು ಮಸಾಲಾ

ಬೇಕಾಗುವ ಸಾಮಗ್ರಿಗಳು :
ಈರುಳ್ಳಿ
ಟೊಮಾಟೊ
ಕತ್ತರಿಸಿದ ದೊಣ್ಣೆ(ದೊಡ್ಡ) ಮೆಣಸಿನಕಾಯಿ
೨-೩ ಟೀ ಸ್ಪೂನ್ ರೀಫೈನ್ಡ್ ಎಣ್ಣೆ ಜೀರಿಗೆ- ೧ ಟೀ ಸ್ಪೂನ್ ಉದ್ದುದ್ದ ಕತ್ತರಿಸಿದ ಹಸಿ ಮೆಣಸಿನಕಾಯಿ
ಕರಿಬೇವಿನ ಸೊಪ್ಪು
ಉಪ್ಪು
ಅರಿಷಿಣ ಪುಡಿ
ಖಾರದ ಪುಡಿ
ಕೊತ್ತಂಬರಿ ಬೀಜದ ಪುಡಿ ಗರಂ ಮಸಾಲಾ ಗಟ್ಟಿಯಾಗಿರುವ ಸಿಹಿ ಮೊಸರು
ನೀರು
ಮಾಡುವ ವಿಧಾನ :
ಮೊದಲಿಗೆ- ಅಗಲ ತಳದ ಪಾತ್ರೆಯಾಂದರಲ್ಲಿ ೨-೩ ಟೀ ಸ್ಪೂನ್ ಎಣ್ಣೆ ಹಾಕಿ. ಪಾತ್ರೆಯನ್ನು ಸ್ಟವ್ ಮೇಲಿಡಿ. ಮಧ್ಯಮ ಉರಿಯಲ್ಲಿ ಜೀರಿಗೆಯನ್ನು ಹುರಿದುಕೊಳ್ಳಿ. ಜೀರಿಗೆ ಹುರಿಯಲು ೧ ನಿಮಿಷ ಸಾಕು.
ಅದೇ ಪಾತ್ರೆಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ ತುಂಡುಗಳು, ತೊಳೆದಿಟ್ಟುಕೊಂಡ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ ತುಂಡುಗಳನ್ನು ಹಾಕಿ. ಈರುಳ್ಳಿ ತುಂಡುಗಳು ಹೊಂಬಣ್ಣಕ್ಕೆ ಬರುವವರೆಗೆ ಬೇಯಲಿ.
ಆನಂತರ ಕತ್ತರಿಸಿ ಸಿದ್ಧಪಡಿಸಿಕೊಂಡ ಟೊಮೊಟೊ ಹಾಗೂ ದೊಡ್ಡ ಮೆಣಸಿನಕಾಯಿ ತುಂಡುಗಳನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಕೈಯಾಡಿಸಿ. ೧ ಲೋಟ ನೀರನ್ನು ಪಾತ್ರೆಗೆ ಸೇರಿಸಿ, ಪ್ಲೇಟ್ ಮುಚ್ಚಿ.
ಪಾತ್ರೆಯಲ್ಲಿನ ಪದಾರ್ಥಗಳು ಚೆನ್ನಾಗಿ ಕುದಿಯಲಿ. ತರಕಾರಿ ಚೆನ್ನಾಗಿ ಬೆಂದ ನಂತರ ಉಪ್ಪು, ಅರಿಷಿಣ ಹಾಗೂ ಕೊತ್ತಂಬರಿ ಪುಡಿ ಸೇರಿಸುವುದು. ಮಿಶ್ರಣವನ್ನು ಚೆನ್ನಾಗಿ ಕಲಕಿದ ನಂತರ ಮತ್ತೆ ೫ ನಿಮಿಷ ಬೇಯಿಸುವುದು.
ಈಗ ಸಿಹಿ ಮೊಸರು ಸೇರಿಸುವ ಸರದಿ. ಮೊಸರು ಸೇರಿಸಿದ ನಂತರದ ಮಿಶ್ರಣವನ್ನು ಮತ್ತೆ ಸ್ಟವ್ ಮೇಲಿಡಿ.
ಉರಿ ಮಧ್ಯಮವಾಗಿರಲಿ. ಮೊಸರಿನಲ್ಲಿನ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಕುದಿಸುವುದು.
ಒಲೆಯಿಂದ ಕೆಳಗಿಳಿಸುವ ಮುನ್ನ – ಗರಂ ಮಸಾಲಾ ಸೇರಿಸುವುದು.
ಪೂರಿ ಹಾಗೂ ಪರೋಟಾಗಳಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ಸೂಪರ್ ಕಾಂಬಿನೇಷನ್. ಬಿಸಿಯಾಗಿರುವಾಗಲೇ ಬಳಸುವುದು ಒಳ್ಳೆಯದು. ಹಸಿ ಈರುಳ್ಳಿ ಹಾಗೂ ಟೊಮೊಟೊ ತುಂಡುಗಳನ್ನು ದೊಡ್ಮೆಣಸಿನಕಾಯಿ ಮೊಸಲು ಮಸಾಲಾದ ಮೇಲೆ ಹರಡಬಹುದು