ಕ್ಯಾನ್ಸರ್ ಪೀಡಿತ ಮಗು – ಚಿಕಿತ್ಸೆಗೆ ಆರ್ಥಿಕ ಸಹಾಯಕ್ಕೆ ಮನವಿ

ರಾಯಚೂರು.ನ.22- ಕಡು ಬಡ ಕುಟುಂಬದ ನಾಲ್ಕು ವರ್ಷದ ಬಾಲಕಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಆರ್ಥಿಕ ಸಹಾಯ ಮಾಡುವಂತೆ ಬಾಲಕಿ ಸಂಬಂಧಿ ಹನುಮೇಶ್ ಮನವಿ ಮಾಡಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಈರೇಶ ಅವರು ತರಕಾರಿ ವ್ಯಾಪಾರಿಯಾಗಿದ್ದು, ಇವರಿಗೆ 4 ವರ್ಷದ ಮಗಳಾದ ಮಾನ್ಯಳಿಗೆ ರಕ್ತದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ಅಳಲು ತೋಡಿಕೊಂಡಿಕೊಂಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದ ಕ್ಯಾನ್ಸರ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುಮಾರು 29 ಲಕ್ಷ ರೂ ವೆಚ್ಚ ಆಗಲಿದೆ. ಈಗಾಗಲೇ ಮಿಲಾಪ್ ಸಂಸ್ಥೆ 9 ಲಕ್ಷ ಖರ್ಚು ವ್ಯವಸ್ಥೆ ಮಾಡಿದೆ. ಇನ್ನೂ 20 ಲಕ್ಷ ಹಣದ ಕೊರತೆ ಆಗಿದೆ ಎಂದರು.
ಅವರ ಸ್ನೇಹಿತ ಹನುಮೇಶ ಮಾತನಾಡಿ, ಕಡುಬಡತನದ ಕುಟುಂಬವಾಗಿದ್ದು ದುಡಿದು ತಿಂದರೆ ಜೀವನ ಸಾಗಿಸುವಂತಿದೆ. ಇಂತಹ ಸಂದರ್ಭದಲ್ಲಿ ಅವರ ಮಗಳಿಗೆ ಬಂದ ಈ ಕ್ಯಾನ್ಸರ್ ರೋಗ ಜರ್ಜರಿತವಾಗಿದೆ. ಸಮಾಜದಲ್ಲಿರುವ ದಾನಿಗಳು ಈ ಕುಟುಂಬದ ಆಸರೆಗೆ ದಾವಿಸುವಂತೆ ಮನವಿ ಮಾಡಿದರು. ಮಾನ್ಯಳ ತಂದೆಯ ಬ್ಯಾಂಕ್ ಖಾತೆ ವಿವರ ಅರ್ ಬಿಎಲ್ ಬ್ಯಾಂಕ್ ರಾಯಚೂರು. ಖಾತೆ ಸಂಖ್ಯೆ-2223330056145035 Ifsc- RATNOVAAPIS ಈ ಖಾತೆಗೆ ಹಣ ದೇಣಿಗೆ ನೀಡಲು ಕೋರಿದರು.
ಈ ಸಂದರ್ಭದಲ್ಲಿ ಈರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.