
ಬೀದರ,ಮೇ 4: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಪ್ ಇಂಡಿಯಾ ( ಎಫ್ ಪಿ ಎ ಐ) ಬೀದರ ಶಾಖೆಯಲ್ಲಿರೋಟರಿ ಕ್ಲಬ್ ಬೀದರ ನ್ಯೂ ಸೆಂಚೂರಿಯ ಸಹಕಾರದೊಂದಿಗೆಡಾ. ಏ.ಐ ಕೃಷ್ಣಮೂರ್ತಿ ಸ್ಮರಣಾರ್ಥ ಮಹಿಳೆಯರ ಕ್ಯಾನ್ಸರ್ ಪತ್ತೆಯ ತಪಾಸಣಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರೋಟರಿಯನ್ ವೋಮಿನ್ನಾ ಸತೀಶ್ ಅವರು ತಪಾಸಣಾ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಾ, ಎಫ್ ಪಿ ಎ ಐ ಸಂಸ್ಥೆಯ 50 ವರ್ಷಗಳ ನಿರಂತರ ಆರೋಗ್ಯ ಸೇವೆಗೆ ಹಾಗೂ
ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಫ್ ಪಿ ಎ ಐಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ್ ಅವರು
ಎಫ್ ಪಿ ಎ ಐಸಂಸ್ಥೆಯುಮಹಿಳೆಯರ ಆರೋಗ್ಯ ರಕ್ಷಣೆಯ ವಿಶೇóóóಷ ಕಾಳಜಿ ಹೊಂದಿದ್ದು,ಮಹಿಳೆಯರಿಗೆ ಗರ್ಭಕೋಶ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಪತ್ತೆಯ ಟೆಸ್ಟ್‍ನ್ನು ಉಚಿತವಾಗಿ ಮಾಡಲಾಗುವುದು ಎಂದುತಿಳಿಸಿದರು.
ರೋಟರಿ ಕ್ಲಬ್ ಬೀದರ ನ್ಯೂ ಸೆಂಚ್ಯೂರ್
ಯ ಅಧ್ಯಕ್ಷ ರೋಟರಿಯನ್ ನಿತಿನ್ ಕರ್ಪೂರ್ ಸ್ವಾಗತ ಕೋರಿದರು.ಎಫ್ ಪಿ ಎ ಐ
ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಸಂಸ್ಥೆಯ ಕುರಿತು ಪರಿಚಯ ನೀಡಿದರು.ರೋಟರಿಯನ್
ಬಾಗಾ ಸಿಂಗ್ ಪನ್ನು,ಶಿವಕುಮಾರ ಪಾಕಲ್, ರೋಟರಿಯನ್ ಡಾ. ರಿತೇಶ್ ಸುಲೇಗಾಂವ್,ರೇಖಾಚಂದಾ ಕಾರ್ಯಕ್ರಮದ ಅತಿಥಿಗಳಾಗಿದ್ದು,ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಎಫ್ ಪಿ ಎ ಐಸಂಸ್ಥೆಯ ಉಪಾಧ್ಯಕ್ಷ ಡಾ. ಸವಿತಾ ಚಾಕೋತೆ, ಮಲ್ಲಿಕಾರ್ಜುನಪಾಟೀಲ್, ಗೌರವ ಖಜಾಂಚಿ ಡಾ. ವಿಜಯ ಕೊಂಡಾ, ಕಾರ್ಯಕಾರಿಣಿಸಭೆಯ ಸದಸ್ಯರಾದ ಡಾ. ಸುಭಾಷ ಬಶೆಟ್ಟಿ, ಪದ್ಮಜಾ ವಿಶ್ವಕರ್ಮ,ಮಾರ್ಗದರ್ಶಕರಾದ ಅಂಬುಜಾ ವಿಶ್ವಕರ್ಮ, ಸ್ಕೌಟ್ಸ್‍ಗೈಡ್ಸ್‍ನ ಜಿಲ್ಲಾಸಂಯೋಜಕರಾದ ಕಲ್ಯಾಣರಾವ ಚಳಕಾಪೂರೆ ಹಾಗೂ ಸಿಬ್ಬಂದಿವರ್ಗದವರುಹಾಗೂ ಇನ್ನಿತರರು ಭಾಗವಹಿಸಿದರು.