ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ಚಾಲನೆ

ಕಲಬುರಗಿ,ಫೆ.5-ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ಕಾರಿ ಜಿಮ್ಸ್ ಆಸ್ಪತ್ರೆ , ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಆಯೋಜಿಸಿದದ ಕ್ಯಾನ್ಸರ್ ಜಾಗೃತಿ ಜಾಥಕ್ಕೆ ಸಿಇಒ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಡಾ.ಶಂಕ್ರಪ್ಪ ಎಸ್.ಮೈಲಾರಿ, ಡಿಹೆಚ್‍ಓ ಡಾ.ರತಿಕಾಂತ ಸ್ವಾಮಿ, ಜಿಮ್ಸ್ ನಿರ್ದೇಶಕ ಡಾ.ಉಮೇಶ್ ರೆಡ್ಡಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರಾದ ಡಾ.ಅಂಬಾರಾಯ ರುದ್ರವಾಡಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ಮುಖ್ಯಸ್ಥ ಗುರುರಾಜ್ ಕುಲಕರ್ಣಿ, ಡಿಎಸ್‍ಓ. ಡಾ.ಸುರೇಶ್ ಮೇಕಿನ್, ಜಿಲ್ಲಾ ಆರ್‍ಸಿಎಚ್‍ಓ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಮ್ಸ್‍ನ ಮುಖ್ಯ ವೈದ್ಯಾಧಿಕಾರಿ ಡಾ.ಗುರುರಾಜ ಹಿರೇಗೌಡರು, ಹಿರಿಯ ತಜ್ಞ ಡಾ.ಜಗದೀಶ ಬೇನೂರು, ಜಿಲ್ಲಾ ಬಾಯಿ ಆರೋಗ್ಯಾಧಿಕಾರಿ ಡಾ.ಸಂಧ್ಯಾ ಕಾನೆಕರ್, ಡಾ.ರಾಜೇಶ್ವರಿ, ಡಾ.ವೈಶಾಲಿ, ಡಿಪಿಸಿ ಎನ್‍ಸಿಡಿ ಡಾ.ಪ್ರೀತಮ್ ತೆಲ್ಕರ್, ಜಿಲ್ಲಾ ಎಸ್‍ಎನ್‍ಸಿಯು ಸಮಾಲೋಚಕ ಮಂಜುನಾಥ ಕಂಬಾಳಿಮಠ, ಇನ್ನಿತರ ಕಾರ್ಯಕ್ರಮ ಅಧಿಕಾರಿಗಳು, ವೈದ್ಯಕೀಯ ಮಹಾವಿದ್ಯಾಲಯದ ನಸಿರ್ಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.