ಕ್ಯಾನೆಸ್ ಉತ್ಸವದಲ್ಲಿ ಐಶು ಮಿಂಚಿಗ್

ನವದೆಹಲಿ,ಮೇ.೧೭-ಫ್ರಾನ್ಸ್‌ನಲ್ಲಿ ೭೭ನೇ ಕ್ಯಾನೆಸ್ ಚಲನಚಿತ್ರೋತ್ಸವ ಅದ್ಧೂರಿಯಾಗಿ ಮುಂದುವರಿದಿದೆ.
ಈಗಾಗಲೇ ಕೆಲವು ನಟಿಮಣಿಯರು ಈ ವೇದಿಕೆಯಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಇದೇ ವೇದಿಕೆಯಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ನೋಟ ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಕೊನೆಗೂ, ನೆಟ್ಟಿಗರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಸಾಮಾಜಿಕ ಜಾಲತಾಣದಲ್ಲೀಗ ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋಗಳದ್ದೇ ಸದ್ದು.
ಗಾಯದ ಕಾರಣ ಬಲಗೈಗೆ ಆರ್ಮ್ ಸ್ಲಿಂಗ್ ಧರಿಸಿದ್ದ ಐಶ್ವರ್ಯಾ ಸದ್ಯ ಅದನ್ನು ತೆಗೆದಿದ್ದಾರೆ. ಆದರೆ, ಅದೇ ಕೈಯಲ್ಲಿ ಬಿಳಿ ಬ್ಯಾಂಡೇಜ್ ಕಾಣುತ್ತದೆ.
೭೭ನೇ ಆವೃತ್ತಿಯ ಈ ಚಿತ್ರೋತ್ಸವದಲ್ಲಿ ರೈ, ಬ್ಲ್ಯಾಕ್, ವೈಟ್, ಗೋಲ್ಡನ್ ಕಾಂಬಿನೆಶನ್ಸ್ ಗೌನ್‌ನಲ್ಲಿ ಕಾಣಿಸಿಕೊಂಡರು. ಪ್ರತೀ ಬಾರಿಯಂತೆ ಈ ವರ್ಷವೂ ವಿಭಿನ್ನ ಶೈಲಿಯ ಉಡುಗೆ ಮತ್ತು ತನ್ನ ಸೌಂದರ್ಯದಿಂದ ಹೆಚ್ಚಿನವರ ಮನ ಗೆದ್ದಿದ್ದಾರೆ. ಐಶ್ವರ್ಯಾ ಫಲ್ಗುಣಿ ಶೇನ್ ಪಿಕಾಕ್ ವಿನ್ಯಾಸಗೊಳಿಸಿರುವ ಉಡುಗೆ ಧರಿಸಿದ್ದರು.
ಐಶ್ವರ್ಯಾ ಕೇನ್ಸ್ ಚಲನಚಿತ್ರೋತ್ಸವದ ಮೆರುಗು ಹೆಚ್ಚಿಸಿದ್ದಾರೆ. ವಿಭಿನ್ನ ಫ್ಯಾಶನ್ ಸೆನ್ಸ್‌ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕೇನ್ಸ್ ಈವೆಂಟ್ನಿಂದ ಸ್ಟಾರ್ ನಟಿಯ ಸುಂದರ ಫೋಟೋಗಳನ್ನು ಬಹಿರಂಗಪಡಿಸಲಾಗಿದೆ.
೨೦೨೪ರ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್ನ ಕೇನ್ಸ್ ಪ್ರದೇಶದಲ್ಲಿ ಇದೇ ಮಾರ್ಚ್ ೧೪ಕ್ಕೆ (ಮಂಗಳವಾರ) ಆರಂಭವಾಗಿದ್ದು, ೨೫ (ಬರುವ ಶನಿವಾರ)ರಂದು ಪೂರ್ಣಗೊಳ್ಳಲಿದೆ. ಊರ್ವಶಿ ರೌಟೇಲಾ, ಐಶ್ವರ್ಯಾ ರೈ ಬಚ್ಚನ್ ಈಗಾಗಲೇ ಕೇನ್ಸ್ ಕಾರ್ಪೆಟ್ ಮೇಲೆ ನಡೆದಿದ್ದಾರೆ. ಉಳಿದಂತೆ ಕಿಯಾರಾ ಅಡ್ವಾಣಿ, ಶೋಭಿತಾ ಧೂಳಿಪಾಲ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.