ಕ್ಯಾದಿಗ್ಗೇರಾ ಗ್ರಾಮದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆ, ಹೋಮ್ ಕ್ವಾರೈಂಟನ್‌ನವರಿಗೆ ಭತ್ಯ

ಅರಕೇರಾ.ಮೇ.೦೧- ಕೊರೋನಾ ಸೋಂಕಿನ ಅರಡನೇ ಅಲೆಯು ವ್ಯಾಪಕವಾಗಿ ಹಬ್ಬುತ್ತಿದೆ ಅತಿ ಪ್ರಕರಣಗಳು ಗ್ರಾಮೀಣಾ ಪ್ರದೇಶದಲ್ಲಿ ಪತ್ತೆಯಾಗುತ್ತಿದ್ದು ಜನರು ಭಯದಿಂದ ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ. ಜನರಿಲ್ಲಿರುವ ಕೊರೋನಾ ಭಯವನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷರಾದ ಪದ್ಮಶ್ರೀ ಕಿಷ್ಟಪ್ಪ ನಾಯಕ ಹೇಳಿದರು.
ಕ್ಯಾದಿಗ್ಗೇರಾ ಗ್ರಾಮ ಪಂಚಾಯತಿವತಿಯಿಂದ ಟಾಸ್ಕ್ ಪೋರ್ಸ್ ಸಮಿತಿ ರಚನೆಯಲ್ಲಿ ಭಾಗವಹಿಸಿ ಮಾತನಾಡಿದರು, ಸಾರ್ವಜನಿಕರು ತಪ್ಪದೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳವುಂತೆ ಸಲಹೆ ನೀಡಿದರು. ಅಲ್ಲದೆ ಕೊರೋನಾ ಸೋಂಕು ದೃಢಪಟ್ಟವರು ೧೪ ದಿನಗಳ ಕಾಲ ಹೋಮ್ ಕ್ವಾರೈಂಟನ್‌ಗೆ ಒಳಗಾಗಿದ್ದಲ್ಲಿ ಕಡು ಬಡವರನ್ನು ಗುರುತಿಸಿ ಅಂತವರಿಗೆ ವಯಕ್ತಿಕವಾಗಿ ಆರೋಗ್ಯ ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಅಭಿವೃದ್ಧಿ ಅಧಿಕಾರಿಯಾದ ಸಿ.ಬಿ.ಪಾಟೀಲ್ ಮಾತನಾಡಿ ಕ್ಯಾದಿಗ್ಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಿಯಂತ್ರಣದ ಅವಶ್ಯಕವಾಗಿದೆ, ಪಾಸಿಟಿವ್ ಪ್ರಕರಣ ದೃಢ ಪಟ್ಟವರು ಮನೆಯಲ್ಲಿಯೇ ಇರಬೇಕು ಅನಗತ್ಯವಾಗಿ ಹೊರಗಡೆ ಓಡಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಕೊರೋನಾ ತಪಾಸಣೆ ಹಾಗೂ ವ್ಯಾಕ್ಸಿನ್ ಲಸಿಕೆಗೆ ಸಹಕಾರ ನೀಡಬೇಕು. ಸೋಂಕನ್ನು ತಡೆಯಲು ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರು ಕೋವ್ಯಾಕಸಿನ್ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ತಿಳಿ ಹೇಳಬೇಕು, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಿ ಅವರ ಕಾರ್ಯಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು. ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಟ್ಯಾಂಕುಗಳನ್ನು ಸ್ವಚ್ಚತೆ ಮಾಡಲು ಸಿಬ್ಬಂದಿವರ್ಗದವರಿಗೆ ತಿಳಿಸದರು. ಸದರಿ ಗ್ರಾಮದಲ್ಲಿ ಸರಕಾರ ಜಾರಿಗೆ ತಂದಿರುವ ೧೪ ದಿನಗಳ ಜನತಾ ಕರ್ಪ್ಯೂಗೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಅದರಂತೆ ಬೆಳ್ಳಿಗ್ಗೆ ೬ರಿಂದ ೧೦ಗಂಟೆಗೆಯವರಗೆ ಮಾತ್ರ ಅಂಗಡಿ.ಹೋಟೇಲ್‌ಗಳಿಗೆ ಸಮಯ ನಿಗದಿ ಪಡಿಸಲಾಗಿದೆ ಎಂದು ಹೇಳಿದರು.
ಅರಕೇರಾಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯಾದ ಪ್ರವೀಣಾನಾಯಕ ಮಾತನಾಡಿ ಶೀತ ಜ್ವರ ನೆಗಡಿ ಕೆಮ್ಮು ಬರುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಸರಿಯಾದ ಸಮಯಕ್ಕೆ ಚಿಕ್ಸಿತೆ ಪಡೆದರೆ ಸಾಕು. ಆದರೆ ಕೊರೋನಾ ಬಗ್ಗೆ ಭಯ ಬೇಡ ಮುನ್ನೆಚ್ಚರಿಕೆಯಾಗಿ ಎಲ್ಲರೂ ಮಾಸ್ಕ್ ಧರಿಸಿ ಪದೆ ಪದೆ ಕೈತೊಳೆದುಕೊಂಡು ಸ್ವಚ್ಚತೆಕಾಪಾಡಿಕೊಳ್ಳಬೇಕು ಅಲ್ಲದೇ ಕೊರೋನಾ ಲಸಿಕೆ ತಪ್ಪದೆ ಎಲ್ಲರೂ ಹಾಕಿಸಿಕೊಳ್ಲುವಂತೆ ಹಾಗೂ ಆರೋಗ್ಯ ಸಿಬ್ಬಂದಿಗಳು ತಮ್ಮ ಮನೆಯ ಹತ್ತಿರ ಬಂದಾಗ ಎಲ್ಲರೂ ಸಹಕರಿಸಿ ಕೊರೋನ್ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಣ ಎಂದರು.
ಈ ವೇಳೆ ಗ್ರಾಮದ ಪಂಚಾಯತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿ, ಸಿ.ಆರ್‌ಪಿ ಅರುಣುಕುಮಾರ ,ಗ್ರಾಮ ಲೆಕ್ಕಾಧಿಕಾರಿ ಮಮತಾ, ಪೋಲಿಸ್ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮುಖಂಡರಾದ ಕ್ರೀಷ್ಟಪ್ಪನಾಯಕ ಮಾಲಿಪಾಟೀಲ್, ರಾಜಶೇಖರನಾಯಕ. ಲೋಕೇಶ. ಲಕ್ಷ್ಮಣ,ರಾಮಣ್ಣ ಎನ್ ಗಣೇಕಲ್, ಸೇರಿದಂತೆ ಇನ್ನಿತರರು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.