ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ಲೋಗೋ ಅನಾವರಣ

ಬೆಂಗಳೂರು,ಏ.೪-ರಿಯಾಯಿತಿ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣಕ ನೀಡುವ ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ಲೋಗೋ ಅನಾವರಣ ಕಾರ್ಯಕ್ರಮ ನಡೆಯಿತು.
ನಗರದ ಕಲಾವಿದರ ಸಂಘದ ಸಭಾಂಗಣದಲ್ಲಿ, ಶಾಖೆಯ ಮುಖ್ಯಸ್ಥರಾದ ಪ್ರಕಾಶ್ ಗೌಡ ನಿರ್ಮಾಪಕರಾದ ಸೆವೆನ್ ರಾಜ್, ಡಾ.ಲೀಲಾ ಮೋಹನ ಹಾಗೂ ಅಸ್ ಲಮ್ ಅವರು ಲೋಗೋ ಅನಾವರಣ ಮಾಡಿದರು.
ದೇಶಾದ್ಯಂತ ವಿದ್ಯಾರ್ಥಿಗಳು ಉತ್ತಮ ವೃತ್ತಿ ಜೀವನವನ್ನು ಸ್ಥಾಪಿಸಲು ಕಷ್ಟಪಟ್ಟು ಅಧ್ಯಯನ ಮಾಡುತ್ತಿದ್ದಾರೆ. ದೇಶದ ಪ್ರತಿಯೊಂದು ಉದ್ಯೋಗಕ್ಕೂ ಸ್ಪರ್ಧೆಯ ಪ್ರಮಾಣದೊಂದಿಗೆ, ಉದ್ಯೋಗ ಕಷ್ಟಕರವಾಗಿದೆ. ಅಂತಹ ಆಕಾಂಕ್ಷಿಗಳಿಗೆ ಉತ್ತಮ ಪ್ರಭಾವ ಬೀರಲು ’ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ತಯಾರಾಗಿದೆ.
ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ವಿವಿಧ ಶಾಖೆಗಳು ರಾಜಾಜಿನಗರ, ಬಸವನಗುಡಿ, ಶೇಷಾದ್ರಿ ಪುರಂ ಹಾಗೂ ಮಲ್ಲೇಶ್ವರಂ ನಲ್ಲಿವೆ.
ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡ ಮಾತನಾಡಿ ದೇಶಾದ್ಯಂತ ವಿಧ್ಯಾರ್ಥಿಗಳಿಗೆ ’ಕ್ಯಾಡ್ ನೆಸ್ಟ್ ಸಂಸ್ಥೆಯು ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೋಸ್೯ಗಳು , ಎಸ್‌ಎಪಿ, ಡಿಜಿಟಲ್ ಮಾರ್ಕೇಟಿಂಗ್ ಕೋರ್ಸ್ ಗಳು, ಸ್ಪೋಕನ್ ಇಂಗ್ಲೀಷ್ ,ಅನಿಮೇಷನ್ ಕೋರ್ಸ್ ಗಳು ನಮ್ಮಲ್ಲಿ ಲಭ್ಯವಿದೆ. ಹಾಗೂ ಬಡ ವಿಧ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಇಲ್ಲಿ ಹೇಳಿಕೊಡಲಾಗುವುದು ಎಂದರು.