ಕ್ಯಾಂಪಸ್ ಸಂದರ್ಶನದಲ್ಲಿ ಬಿ.ಎಲ್.ಡಿ.ಇ ಯ 150 ವಿದ್ಯಾರ್ಥಿಗಳು ಆಯ್ಕೆ: ಡಾ.ಅತುಲ್ ಆಯಿರೆ

ವಿಜಯಪುರ, ಎ.24-ಬಿ.ಎಲ್.ಡಿ.ಇ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಕ್ಯಾಂಪಸ್ ಸಂದರ್ಶನದಲ್ಲಿ 150ಕ್ಕು ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಅತುಲ್ ಆಯಿರೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಬಹುತೇಕ ಕಂಪನಿಗಳಲ್ಲಿ ನೇಮಕಾತಿ ಕುಂಠಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಉದ್ಯೋಗ ಪಡೆದುಕೊಳ್ಳುವ ಹಂಬಲವನ್ನು ಹೊಂದಿ, ಸ್ಪರ್ಧೆಗೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಕಲಿಕಾ ಹಂತಗಳನ್ನು ಸುಧಾರಿಸಲು ಪ್ರಾಯೋಗಿಕ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಂಶೋಧನೆ ಮತ್ತು ಆವಿಷ್ಕಾರ ಆಧಾರಿತ ಪರಿಣಾಮಕಾರಿ ಬೋಧನೆ (ಉದಾ: ರೊಬೊಟಿಕ್ಸ್, ಮೆಷಿನ್ ಲನಿರ್ಂಗ್, 3ಡಿ ಪ್ರಿಂಟಿಂಗ್ ಮತ್ತು ಡ್ರೋನ್‍ಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.) ಮಾಡುವಲ್ಲಿ ನಮ್ಮ ಕಾಲೇಜು ಕ್ರಮಕೈಗೊಂಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು.
ಡ್ಯೂ ಸಾಂಕ್ರಾಮಿಕ ಮತ್ತು ಐಟಿ ಮೇಜರ್ಸ್ ಕಾಗ್ನಿಜೆಂಟ್, ಟಿಸಿಎಸ್, ವಿಪೆÇ್ರೀ, ಇನ್ಫೋಸಿಸ್, ಸೊನಾಟಾ ಸಾಫ್ಟ್‍ವೇರ್ ಕಂಪನಿಗಳು ಸೇರಿದಂತೆ ಒಟ್ಟು 40 ಕಂಪನಿಗಳು ಕ್ಯಾಂಪಸ್‍ಗೆ ಭೇಟಿ ನೀಡಿದ್ದವು. ಕಾಗ್ನಿಜೆಂಟ್ ಕಂಪನಿಯು 10ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರೂ.6.75ಲಕ್ಷ (ವಾರ್ಷಿಕ) ಸಂಬಳ ಹಾಗೂ ಟಿಸಿಎಸ್ ಕಂಪನಿಯು 14 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ರೂ.4.2ಲಕ್ಷ (ವಾರ್ಷಿಕ) ಸಂಬಳ ನಿಗದಿಪಡಿಸಿದೆ ಎಂದು ಪ್ರಾಚಾರ್ಯ ಡಾ.ಅತುಲ್ ಆಯಿರೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂತಿಮ ವರ್ಷದ ವಿದ್ಯಾರ್ಥಿಗಳ ಈ ಸಾಧನೆಗೆ ಬೋಧಕ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.