ಕ್ಯಾಂಡೆಲ್ ಬಳಸಿ ಕೇಶ ವಿನ್ಯಾಸ ಮಾಡುವ ಕಲಾವಿದನ ಕೈಚಳಕ

(ಮಲಿಕಪಾಶಾ ಮೌಜನ್)
ವಾಡಿ: ಮೇ.30:ಕತ್ತರಿಯಿಂದ, ಮಶೀನ ಮೂಲಕ ಕೇಶವನ್ನು ವಿನ್ಯಾಸ ಮಾಡುವುದನ್ನು ನೋಡಿದ್ದೆವೆ. ಆದರೆ, ಇಲ್ಲೋಬ್ಬ ಕಲಾವಿ ಮೆಣದ ಬತ್ತಿಗೆ ಬೆಂಕಿ ಹಚ್ಚಿ ವಿವಿಧ ವಿನ್ಯಾಸದ ಡಿಸೈನ್ ಮಾಡುವ ಮೂಲಕ ಯುವಕರಿಗೆ ಆಕರ್ಶಿತನಾಗಿದ್ದಾನೆ.
ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮzಲ್ಲಿ ಶ್ರೀಗುರು ಹೇರ್ ಕಟಿಂಗ್ ಅಂಗಡಿಯನ್ನಿಟ್ಟುಕೊಂಡ ಭಾಗಣ್ಣ ಮಹಾದೇವ ಹಡಪಾದ ಎನ್ನುವ ಯುವಕ ಡೀಫ್‍ರೆಂಟ್ ಸ್ಟೈಲ್‍ನಲ್ಲಿ ಗ್ರಾಹಕರಿಗೆ ಅನೂಕುಲವಾಗುವ ನಿಟ್ಟಿನಲ್ಲಿ ಕೂದಲನ್ನು ವಿನ್ಯಾಸ ಮಾಡುತ್ತಿದ್ದಾನೆ. ಯುವಕರು ಕ್ಯಾಂಡಲ್‍ಗೆ ಬೆಂಕಿ ಹಚ್ಚಿ ಹೇಗೆ ಕಟಿಂಗ್ ಮಾಡಲಾಗುತ್ತದೆ ಎಂದು ನೋಡಲು ಕಾತುರಾಗುತ್ತಿದ್ದಾರೆ.
ಹೊರದೇಶದಲ್ಲಿ ಇಂತಹ ವಿಭಿನ್ನ ವಿಭಿನ್ನ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ, ಇಂದು ಗ್ರಾಮೀಣ ಪ್ರದೇಶದ ಯುವಕನು ತಾನು ವೃತ್ತಿ ಯಲ್ಲಿಯೇ ವಿಭಿನ್ನ ಪ್ರಯತ್ನ ಮಾಡುವ ಮೂಲಕ ಕಾಯಕದಲ್ಲಿಯೇ ಕೈಲಾಸ ಕಾಣುತ್ತಿದ್ದಾನೆ.
ದ್ವೀತಿಯ ಪಿಯುಸಿ ನಂತರ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಕಾಯಕದಲ್ಲಿ ನಿತರರಾಗಿದ್ದಾನೆ. ಕಳೆದ 1 ವರ್ಷದಲ್ಲಿ 20ಕ್ಕೂ ಅಧಿಕ ಜನರಿಗೆ ಕ್ಯಾಂಡೆಲ್ ಕೇಶ ವಿನ್ಯಾಸ ಕಟಿಂಗ ಮಾಡಿ ಜನಮನ ಸೆಳೆದಿದ್ದಾನೆ. ಸರ್ಕಾರದ ಲಾಕ್‍ಡೌನ್‍ನಿಂದ ಬದುಕು ಕಷ್ಟಕರವಾಗಿದೆ.


ಬಡತನದಲ್ಲಿ ಜನಿಸಿದ ನಾನು ಪಿಯುಸಿವರೆಗೆ ವಿಧ್ಯಾಬ್ಯಾಸ ಮಾಡಿದ್ದೆನೆ. ಅಂಗಡಿಯಲ್ಲಿ ವಿಭಿನ್ನ ರೀತಿಯಲ್ಲಿ ಕಟಿಂಗ್ ಮಾಡುವ ಕಾಯಕದಲ್ಲಿ ನಿರತರಾಗಿದ್ದೆನೆ.ಯುವಕರು ಆಕರ್ಷಿತರಾಗಿ ತಮಗೆ ಅನಿಸಿದ ಆಕಾರದಲ್ಲಿ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದಾರೆ. 10 ವರ್ಷದ ಹಿಂದೆ ಶಹಬಾದ ನಗರದಲ್ಲಿ ಈ ತರಹ ವಿನ್ಯಾಸ ಮಾಡಲಾಗತ್ತಿತ್ತು. ಸರ್ಕಾರ ಘೋಷಿಸಿರುವ ಲಾಕ್ಡೌನ್‍ನಿಂದ ಗ್ರಾಹಕರು ಕರೆದ ಸ್ಥಳಕ್ಕೆ ಹೋಗಿ ಕೆಲಸ ನಿರ್ವಹಿಸುತ್ತಿದ್ದೆನೆ.
ಭಾಗಣ್ಣ ಹಡಪಾದ ಕ್ಯಾಂಡಲ್ ಕೇಶ ಕಲಾವಿದ ರಾವೂರ.


ಗ್ರಾಮದಲ್ಲಿ ಇಂತಹ ಪ್ರತಿಭೆ ಇರುವುದು ಹೆವ್ಮ್ಮೆಯ ವಿಷಯ. ಯುವಕರು ಕಾಯಕದಲ್ಲಿ ನಿರತರಾಗಿ ಸಾಧನೆಯ ಶಿಖರವೇರಬೇಕು.ತಂದೆ-ತಾಯಿ ಗ್ರಾಮಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಯುವಕರು ಮಾಡಬೇಕು.
ರಾಘವೇಂದ್ರ ಹೂಗಾರ. ಸಾಮಾಜಿಕ ಕಾರ್ಯಕರ್ತ