ಕ್ಯಾಂಡಲ್ ಹಚ್ಚಿ ಮತದಾನ ಜಾಗೃತಿ

ನರೇಗಲ್ಲ,ಏ14: ಮತದಾನ ಹಕ್ಕು ಹೊಂದಿರುವ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣದ ಹತ್ತಿರ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಕ್ಯಾಂಡಲ್ ದೀಪದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿ, ನರೇಗಲ್ಲನಿಂದ ಬೇರೆ ಊರಿಗೆ ವಲಸೆ ಹೋಗಿರುವ ಜನರನ್ನು ಕರೆಯಿಸಿ ತಮ್ಮ ಮತ ಚಲಾಯಿಸಲು ತಿಳಿಸಬೇಕು. ವಲಸೆ ಹೋಗಿರುವವರು ನಿಮಗೆ ಸಂಪರ್ಕ ಆಗದಿದ್ದರೆ ಪ.ಪಂ ಸಿಬ್ಬಂದಿಗೆ ಅವರ ದೂರವಾಣಿ ಸಂಖ್ಯೆ ನೀಡಿದರೆ ನಮ್ಮ ಸಿಬ್ಬಂದಿ ಅವರನ್ನು ಸಂಪರ್ಕಿಸಿ ಮತದಾನ ಮಾಡಿಸುವ ಕೆಲಸ ಮಾಡುತ್ತಾರೆ ಎಂದರು.
ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ, ಆರೀಫ್ ಮಿರ್ಜಾ, ಮುತ್ತು ಹೂಗಾರ, ಪಾಂಡುರಂಗ ರಾಮಪುರ, ವೆಂಕಟೇಶ ಮಡಿವಾಳ, ನಾ ಸಂಜೀವ ಗುಡಿಮನಿ, ಉದಯ ಮುದೇನಗುಡಿ, ಶೇಖಪ್ಪ ಹೊನವಾಡ, ಅಶೋಕ ಹೊಸಳ್ಳಿ, ಮಹಾದೇವ ಮ್ಯಾಗೇರಿ ಸೇರಿದಂತೆ ಅನೇಕರಿದ್ದರು.