ಕೌಶಿಕ ಮಹರಾಜನಲ್ಲ ಕಸಪ್ಪಯ್ಯ ಮಹರಾಜ:ಸೌಭಾಗ್ಯ ಲಕ್ಷ್ಮೀ


ಸಂಜೆವಾಣಿ ವಾರ್ತೆ
ಸಂಡೂರು :ಜು:28  ಕಾವ್ಯಗಳ ಸೃಷ್ಠಿಯಲ್ಲಿ ಕೌಶಿಕ ಮಹರಾಜನೆಂಬ ಉಲ್ಲೇಖ ಇದೆ. ಆದರೆ, ಎನೆ.ಎಮ್. ಕಲಬುರಗಿ ಯವರ ಸಂಶೋಧನೆಯಲ್ಲಿ ಎಚ್.ಎಸ್. ಅನುಪಮರವರ ಬರೆದ ಲೇಖನದಲ್ಲಿ ಕೌಶಿಕ ಮಹರಾಜರೆಂಬ ಹೆಸರು ಎಲ್ಲಿಯೂ ಉಲ್ಲೇಖವಿಲ್ಲ. ಕಸಪ್ಪಯ್ಯ ಇವರು ಸಾಮಾಂತ ರಾಜನಾಗಿದ್ದು, ಸಾವಿರ ಹಳ್ಳಿಗಳನ್ನು ಗಾವುಂಡರಾಗಿ ಆಳ್ವಿಕೆ ನಡೆಸಿದ ಕಸಪ್ಪಯ್ಯ ನಡುವೆ ಸಾಮಂತ ಮಹರಾಜನು ಕಲ್ಯಾಣದ ಅರಸರಾದ ಚಾಣುಕ್ಯ ಅರಸರಿಗೆ ಕಪ್ಪಕಾಣಿಕೆ ನೀಡುತ್ತಿದ್ದ ಕಳಚೂರಿನ ಬಿಜ್ಜಳ ಮಹರಾಜರು ಕಲ್ಯಾಣದ ಅರಸರ ರಾಜ್ಯವನ್ನು ವಶಪಡಿಸಿಕೊಂಡಾಗ ಕಸಪ್ಪಯ್ಯ ಎನ್ನುವವರು ಬಿಜ್ಜಳ ರಾಜನಿಗೆ ಸಾಮಂತ ರಾಜನಾಗಿ ಕಪ್ಪು ಕಾಣಿಕೆಯನ್ನ ನಿಡಿದ ಎಂದು ಹೊಸಪೇಟೆ ತಾಲ್ಲೂಕು ಶ.ಸ.ಪ. ಅಧ್ಯಕ್ಷರು, ಚಿತ್ತವಾಡಗಿ ಪದವಿಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕಿ ಎಚ್. ಸೌಭಾಗ್ಯ ಲಕ್ಷ್ಮೀಯವರು ತಿಳಿಸಿದರು.
ಅವರು ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಹಾಗೂ ಅಕ್ಕನಬಳಗದ ಸಹಯೋಗದೊಂದಿಗೆ ಅನುಭಾವಗೋಷ್ಠಿ ವೀರವರಾಗಿಣಿ ಅಕ್ಕಮಹಾದೇವಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರಮಪೂಜ್ಯಶ್ರೀ ಪ್ರಭುಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮ ಉದ್ಘಾಟನೆಯನ್ನ ಅಕ್ಕನಬಳಗದ ಅಧ್ಯಕ್ಷೆ ಜ್ಯೋತಿ ಗುಡೇಕೋಟೆ ನಾಗರಾಜರವರು ಉದ್ಘಾಟಿಸಿದರು. ಉಪನ್ಯಾಸಕಿ ಎಚ್. ಸೌಭಾಗ್ಯ ಲಕ್ಷ್ಮೀ ಮುಂದುವರೆದ ಮಾತನಾಡಿ ಒಬ್ಬಬ್ಬ ಲೇಖಕರು ವಿಮರ್ಷಕರು ಒಂದೊಂದು ರೀತಿಯಲ್ಲಿ ಚರಿತ್ರೆಯನ್ನು ವಿಮರ್ಷೇ ಮಾಡುವುದರ ಜೊತೆ ಚರ್ಚೆಗೆ ಗುರಿಪಡಿಸುತ್ತಾರೆ. ಯಾರು ಯಾರಿಗೆ ತೊಂದರೆಯಿಲ್ಲ. ಅವರ ಗುಣಗಳು ಮುಖ್ಯ. 12ನೇ ಶತಮಾನದಲ್ಲಿ ಬಸವಣ್ನನವರ ಅನುಭವ ಮಂಟಪದಲ್ಲಿ ಡೋಹರ ಕಕ್ಕಯ್ಯ ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಶಂಕರ ದಾಸಿಮಯ್ಯ ಮಡಿವಾಳ ಮಾಚಿದೇವ ಹಲವಾರು ಶರಣರು ವಚನಗಳನ್ನು ಬರೆದು ಜಗತ್ತಿಗೆ ಸಂದೇಶವನ್ನು ಸಾರಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಾಮಾಣಿಕವಾಗಿ ಫಲಪಟ್ಟರು ಪ್ರಯೋಜನನಪಟ್ಟರು ಫಲ ನೀಡಲಿಲ್ಲ. ಬನಸವಣ್ಣನವರು ಸಾಧನೆಯ ಪರಿಶ್ರಮವೇ ಅನುಭವ ಮಂಟಪ ನಿರ್ಮಾಣ ಮಾಡಲು ಸಾಧ್ಯವಾಯಿತು. ಈಗಿರುವ ಮೀಸಲಾತಿ ಪದ್ದತಿಯನ್ನ 12ನೇ ಶತಮಾನದಲ್ಲಿ ಬಸವಣ್ಣನವರು ಜಾರಿಗೆ ತಂದು ಶೂನ್ಯ ಪೀಠದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಆಯ್ಕೆಯಾದರು. ಶೊಷಿತವರ್ಗದ ಶರಣರಾದ ಹಡಪದ ಅಪ್ಪಣ್ಣ, ಅಂಬಿಗರ ಮಾಚಿದೇವ , ಮಾದರ ಚೆನ್ನಯ್ಯ ಹರಳಯ್ಯನಂತ ಶರಣರ ಶ್ರಮವೇ ಬಸವಣ್ಣನವರು ಮೇರು ಪರ್ವತದ ವ್ಯಕ್ತಿಯಾಗಿ ಸಮಾಜ ಸುಧಾರಣೆಗೆ ಶ್ರಮಪಟ್ಟರು.
ಅಲ್ಲಮ ಪ್ರಭುಗಳ ಮಾಯೆ ಗೆದ್ದು ಅನುಭವ ಮಂಟಪದಲ್ಲಿ ಹಲವಾರು ರೀತಿಯ ಪ್ರಶ್ನೆಗಳಿಗೆ ಸಮರ್ಪಕವಾಗಿ ಅಕ್ಕಮಹಾದೇವಿ ಉತ್ತರ ನೀಡಿ ಉತ್ತುಂಗ ಸ್ಥಾನಕೆಕ ಏರಿದ ಮಹಾದೇವಿಗೆ ಅಕ್ಕ ಎನ್ನುವ ಬಿರುದು. ವೀರವಿರಾಗಿಣಿ ಎನ್ನುವ ಬಿರುದು ನೀಡಿ ಚೆನ್ನಮಲ್ಲಿಕಾರ್ಜುನನ ಶೋಧನೆಗೆ ಬೀಳ್ಕೊಟ್ಟರು ಮುಂದೆ ಹಲವಾರು ರೀತಿಯ ತೊಂದರೆಯನ್ನ ಅನುಭವಿಸಿ ಶ್ರೀಶೈಲದ ಚೆನ್ನಮಲ್ಲಿಕಾರ್ಜುನರಲ್ಲ ಲೀನಳಾದವಳು ಅಕ್ಕಮಹಾದೇವಿ. ಚೆನ್ನ ಮಲ್ಲಿಕಾರ್ಜುನನ್ನೆ ಗುರಿಯಾಗಿಟ್ಟು ಕೊಂಡು ಚೆನ್ನ ಮಲ್ಲಿಕಾರ್ಜುನ ಎನ್ನುವ ಅಂಕಿತದಿಂದ ಸಾಹಿತ್ಯವನ್ನು ರಿಚಿಸಿ ಸಮಾಜದ ಸುಧಾರಣೆಗೆ ಶ್ರಮಿಸಿದವರು ಅಕ್ಕಮಹಾದೇವಿ ಎಂದು ಉಪನ್ಯಾಸಕರು ತಿಳಿದಿರು. ಈ ಸಂದರ್ಭದಲ್ಲಿ ಅಕ್ಕನಬಳಗದ ಗೌರವ ಅಧ್ಯಕ್ಷೆ ಶಾಂತಲಾ ಪ್ರಭುರಾಜ ಅಂಕಮನಾಳ್ ಕಾರ್ಯದರ್ಶಿ ಉಗ್ರಾಣದ ವಿಶಾಲಾಕ್ಷಮ್ಮ ಕುಮಾರಸ್ವಾಮಿ ಗುಡೇಕೊಟೆ ನಾಗರಾಜ ಹಲವಾರು ಮಹಾನೀಯರು ಉಪಸ್ಥಿತರಿದ್ದರು. ನರಿ ಬಸವರಾಜ ವೀರಭದ್ರೇಶ್ವರ ಮಹಿಳಾ ಭಜನೆ ಮಂಡಳಿಯವರಿಂದ ಸಂಗೀತ ಸೇವೆ ಕಮ್ಮಾರ ಉಮೇಶ್ ರವರು ತಬಲಾ ಸಾಥಿ ಮನಮೋಹಕ ಗೊಂಡಿತು. ನಳಿನಿ ಪ್ರದೀಪ್ ಕುಮಾರ ಉರ್ದು ಪ್ರೌಢಶಾಲೆ ಕನ್ನಡ ಶಿಕ್ಷಕಿ ನಿರೂಪಿಸಿದರು.